ಹಲವು ಬಣ್ಣ

ಹಲವು ಬಣ್ಣ
~~~~~~~
ಕಿರುನಗೆಯೇ ಮಿಗಿಲಾಯ್ತು ನಗಲು
ಹುಸಿನಗೆಗೂ ಮಿಗಿಲಿಲ್ಲ  ಅಮಲು
ಕಿಡಿನುಡಿಯ ನುಡಿವುದೇ ತೆವಲು
ಹಿರಿಕಿರಿಯ ಮನವೆರಡು ಕವಲು
ಭಾವನೆಯೇ ಮನಸ್ಸಿಗೆ  ಕಾವಲು 

ನಾನೇ ಮಿಗಿಲು ಎಂದಾಗದಿರಲು
ಎಲ್ಲೆ ಮೀರಲು ನಮಗಾಗದವರು
ಹಾದಿ ತೋರಲು ಮುಂದಾಗಿರಲು
ನೀಡಿ ಪಡೆದ ಉಡುಗೊರೆಗಳು
ಮನಕೆ ಸಂಭ್ರಮ ತಾರದೇ ಇರಲು

ಮರೆಯಲೇಬೇಕಿದೆ ಹಲವು ಬಣ್ಣ
ಮರೆಯದಿದ್ದರೆ ಬದುಕಿಗದು ಸುಣ್ಣ
ಬಳಕೆಯಾಗದ ಬದುಕು ಸವೆಯದಣ್ಣ
ನಡೆಯುವವ ಎಡವುವುದು ಸಹಜವಣ್ಣ
ಕ್ಷಮೆ ಕೋರಿ ತೆರೆಸಿಬಿಡಿ ಅರಿಯ ಕಣ್ಣ

ವೈಲೇಶ.ಪಿ. ಯೆಸ್. ಕೊಡಗು
೧೬/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು