ದೊಂಬರಾಟ

ದೊಂಬರಾಟ
~~~~~~~
ಪೂರ್ವಾಗ್ರಹ ಪೀಡಿತರಿಗೆ ಒಳಿತಾಗಲಿ
ಆಗ್ರಹ ಎಂಬುದು ಮನದಲಿ ಅಳಿಯಲಿ
ನಾವೆಷ್ಟೇ ಬದಲಾದರೂ ನಡೆನುಡಿಯಲಿ
ಸ್ವಲ್ಪವೂ ಬದಲಾಗದು ಅವರೆದೆಯಲಿ

ಅದ ಹಿಡಿದೇ ಮತ್ತೆ ಕೆಲವರ ಉಪನ್ಯಾಸ
ಅರಿತಿದ್ದರೂ ಅರಿಯದಂತೆ ಅಪಹಾಸ್ಯ
ಅದೆಂದಿಂಗೂ ಬೇಡ ಇವರ ಸಹವಾಸ
ಎಂದೆಂದಿಗೂ ನಮಗಿರಲಿ ಏಕಾಂತವಾಸ

ತಮ್ಮ ಬೇಳೆ ಬೇಯಿಸಿಕೊಳ್ಳಲಿವರಾಟ
ಚಾಡಿ ಮಾತಿನೊಳಗಿವರ ದೊಂಬರಾಟ
ವಾಗ್ಚಾತುರ್ಯದಿ ಇವರು ಆರ್ಯಭಟ
ಮಿಥ್ಯೆಗಳುದುರುವವೂ ಪಟ ಪಟ ಪಟ

ಚಿಂಥಿಸಿ ಮಂಥಿಸಿ ನೋಡುವ ಮನವಿರಲಿ
ಸತ್ಯವೆಂದಿಗೂ ಸಾಯಲಾರದು ಜಗತ್ತಿನಲಿ
ಇಂದಿಗೆ ಸೋತರು ಮೊಗದಲಿ ನಗುವಿರಲಿ
ಕಳಂಕ ತೊಲಗುವ ದಿನಗಳು ಬೇಗ ಬರಲಿ 

ವೈಲೇಶ ಪಿ ಯೆಸ್ ಕೊಡಗು
೧೩/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು