ಕಾರಣವಿಲ್ಲದೇ ?

ಕಾರಣವಿಲ್ಲದೇ?
~~~~~~~~~
ಮನ ಮನಗಳ ನಡುವೆ ಮನಸ್ತಾಪ
ಮೂಡಿ ಏರಿದೆ ಜಗದ ಉರಿ ತಾಪ
ಸುರಿದರು ಕೆಲವರು ಬಾರೀ ಉಪ್ಪ
ಮತ್ತೆ ಹಲವರು ಚೆಲ್ಲಿ ತಾ ಬಿಸಿ ತುಪ್ಪ 

ಹುಡುಗಾಟಕೆ ಈಡುಗಾಯಿ ಒಡೆದು
ಹುಳುಕಾಗಿ ಬೆಳೆದು ಕೋಪವ ಹಡೆದು
ನಿತ್ಯ ಸತ್ಯವ ಮರೆತು ತಾಪವ ಜಡಿದು
ಬೆಳೆಯಿತು ವೈರದ ವೈಭವ ನಡೆ ನಡೆದು

ನಿಂದಿಸಿದರಂದು ಹೊಗಳಿದಂತೆ
ಹೊಗಳಿದರಿಂದು ತೆಗಳಿದರಂತೆ
ನಲ್ಭಾವನೆಗೆ ನುಡಿದುದೆಲ್ಲಾ ಒಳಿತೆ
ಹುಳುಕು ಮನಕೆ ಇಂದೆಲ್ಲಾ ಕೊಳೆತೇ

ಸಿಡಿಮಿಡಿಗೆ ಮನದಲಿ ರಣರಣ
ಕೋಪ ಇರುವವರೆಗೂ ಹೈರಾಣ
ಮನದ ಭಾವನೆಗೆ ಸಿಹಿ ತೋರಣ
ಕಟ್ಟಿ ಓಡಿಸಿ ಕಾರಣವಲ್ಲದ ಕಾರಣ

ವೈಲೇಶ ಪಿ ಯೆಸ್ ಕೊಡಗು
೧೦/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು