ಲಿವಿಂಗ್ ಟು ಗೆದರ್

ಸ್ಪರ್ಧೆಗಾಗಿ
ಲಿವಿಂಗ್ ಟು ಗೆದರ್ ಸಾಧಕ ಬಾದಕಗಳೆಂಬ ವಿಷಯದ ಬಗ್ಗೆ
ಇದೊಂದು ವಿಚಾರ ನನಗೆ ಸೋಜಿಗವೇ ಲೀವಿಂಗ್ ಟು ಗೆದರ್. ಅದರಲ್ಲೂ ಒಂದು ಗಂಡು ಒಂದು ಹೆಣ್ಣು ಮದುವೆಯಾಗದೇ ಒಟ್ಟಿಗೆ ಜೀವಿಸುವುದು. ಅಲ್ರೀ ಕರುನಾಡಿನ ಹಳ್ಳಿಗಳಲ್ಲಿ ಚಿಕ್ಕ ಪುಟ್ಟ ಪಟ್ಟಣಗಳಲ್ಲಿ  ಒಂದು ಗಂಡು ಹೆಣ್ಣು ಕೇವಲ ಕೆಲವು ನಿಮಿಷಗಳಷ್ಟು ಅವಧಿಯ ಸಮಯದಲ್ಲಿ ಗಜ ದೂರದಲ್ಲಿ ನಿಂತು ಮಾತನಾಡಿದರೆ ಅದೊಂದು ಬ್ರೇಕಿಂಗ್ ಸುದ್ದಿ.

ಅಂತಹುದರಲ್ಲಿ  ಕೇವಲ ಕೆಲವು ದಿನಗಳ ಪರಿಚಯದ ಪರಪುರುಷನೊಂದಿಗೆ ಅಥವಾ ಪರಸ್ತ್ರೀಯೊಂದಿಗೆ ಅಂದರೆ ದಂಪತಿಗಳಲ್ಲದವರು ಒಟ್ಟಿಗೆ ಬಾಳುವುದು, ಜೀವನ ನಡೆಸುವುದು, ಅದ್ಹೇಗೆ ಭಾರತೀಯ ಸಮಾಜ ಒಪ್ಪುತ್ತದೆಯೋ ಆ ದೇವರೇ ಬಲ್ಲ. ಇದು ನಮ್ಮ ಸಂಸ್ಕೃತಿ ಅಲ್ಲದಿದ್ದರೂ ಈಗ ಭಾರತದಲ್ಲಿ ಕೂಡ ಈ ವಿದ್ಯಮಾನಗಳು ನಡೆಯುತ್ತಿದೆ. ಅದೊಂದು ವಿಚಾರವಾಗಿ ಬರಹಕ್ಕೆ ವಿಷಯವಾಗಿದೆ ಎಂದರೆ ಮತ್ತೇನು ಹೇಳಲು ಸಾಧ್ಯ ಅಲ್ವೇ.

ವಿವಾಹೇತರ ಸಹಬಾಳ್ವೆ ಹೇಗೆ ಎಂಬುದು ಸ್ಪಷ್ಟವಾಗಿ ನನಗೆ ತಿಳಿದಿಲ್ಲ. ಇಲ್ಲಿ ದಂಪತಿಗಳು ನಡೆಸುವಂತೆ ಜೀವನ ನಡೆಸುತ್ತಾರೆ ಎಂದಾದರೆ ಲಗ್ನವಿಲ್ಲದ ದಾಂಪತ್ಯ ಜೀವನ ನಮ್ಮ ಚರಿತ್ರೆಯನ್ನು ಹಾಳುಗೆಡುವುದಿಲ್ಲವೇ. ಇದರಿಂದಾಗಿ ಹುಟ್ಟಿದ ಮಕ್ಕಳಿಗೆ ಯಾರು ಜವಾಬ್ದಾರರು. ಕೋರ್ಟ್ ಹೇಳುವಂತೆ ಹೇಳುವುದಾದರೆ ಮಗು ತಾಯಿಯ ಜವಾಬ್ದಾರಿ. ಆಗ ತಂದೆಯಾದವನ ಪಾತ್ರವೇನು. ಪರಸ್ಪರ ಆಕರ್ಷಣೆ ಮುಗಿದ ನಂತರ ಇಬ್ಬರ ನಡುವಿನ ಸಂಬಂಧವನ್ನು ಏನೆಂದು ಕರೆಯುತ್ತಾರೆ. ಈ ಸಂಬಂಧವನ್ನು ಸಮಾಜ ಪೋಷಕರು ಒಪ್ಪುವರೇ ಅಥವಾ ಇಬ್ಬರಲ್ಲಿ ಒಬ್ಬರ ಮರಣ ಅಥವಾ ಕಾಯಿಲೆಗೆ ಬಿದ್ದರೆ ಅದು ಹೇಗೆ ನಿಭಾಯಿಸುವರು.

ಸಂಪ್ರದಾಯಸ್ಥ ಕುಟುಂಬದವರುಗಳು ಇದನ್ನು ಹೇಗೆ ಸ್ವೀಕರಿಸುವರು ಎಂಬುದು ನನಗೆ ಇನ್ನೂ ಜಿಜ್ಞಾಸೆಯ ವಿಚಾರ. ಅನುಭವದ ಮಾತಂತು ಮೊದಲೇ ಗೊತ್ತಿಲ್ಲ. ಆಲೋಚಿಸಿದಾಗ ಮೂಡುವ ಅಂಶಗಳಷ್ಟೇ ಇವುಗಳು. ಈಗಿನ ಕಾಲದಲ್ಲಿ ಸಂಪ್ರದಾಯದ ಪ್ರಕಾರ ಮದುವೆ ಆದವರಿರಬಹುದು, ರಿಜಿಸ್ಟರ್ ವಿವಾಹವಾದರೂ ಸಹ ಪರಸ್ಪರ ಹೊಂದಾಣಿಕೆ ಇಲ್ಲದೇ ದಿನ ದಿನವೂ ಕಚ್ಚಾಟ ಒದ್ದಾಟ ಕೋರ್ಟ್ ಕಛೇರಿಯ ಓಡಾಟ ಕೊನೆಯಲ್ಲಿ ವಿಚ್ಚೇದನ ಬದುಕಿರುವವರೆಗೆ ನರಳಾಟ ನಾಚಿಕೆಗೆಟ್ಟ ಬದುಕಿಗೆ ಅಂಜುವ ಮಾನವಂತರು ಆತ್ಮಹತ್ಯೆಯೊಂದಿಗೆ ಕೊನೆಯಾಟ.

ಇಲ್ಲಿ ಪರಸ್ಪರ ಸಂಬಂಧ ನಂಬಿಕೆಗಳಿಗಿಂತ ನಮ್ಮ ಸಂಪಾದನೆ ನಮ್ಮ ಸಾಮರ್ಥ್ಯದ ಮೇಲೆ ಜೀವನ. ಅದು ನಮ್ಮ ದೈಹಿಕ ಮಾನಸಿಕ ನಮ್ಮ ಶಕ್ತ್ಯಾನುಸಾರ ವಿವೇಚನೆ ಬಲಾಬಲಗಳ ಅವಲಂಬಿತವಾಗಿದೆ. ಒಟ್ಟಾರೆ ಇದು ನಮ್ಮ ದೇಶದ ಸಂಸ್ಕೃತಿಯ ಭಾಗವಾಗಲು ಸರಿಯಾದ ನೀತಿಯಲ್ಲ ಎಂಬ ಭಾವನೆ ನನ್ನದು. 

ಅಂತಹುದರಲ್ಲಿ ಈ ಸಂಸ್ಕೃತಿಯಲ್ಲಿ ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಏನು ಅಲ್ವೇ. ಇದೆಲ್ಲಾ ದಿನಕ್ಕೊಂದು ಮದುವೆ ವರ್ಷಕ್ಕೊಂದು ವಿಚ್ಛೇದನ ಇಂತಹ ಸಂಸ್ಕೃತಿಯುಳ್ಳ ಪಾಶ್ಚಾತ್ಯರಿಗೆ ಸರಿ ನಮಗಲ್ಲ ಎಂಬುದು ನನ್ನ ಭಾವನೆ. ಸಾಧಕ ಬಾಧಕ ಎಂದರೆ ಸಾಂಪ್ರದಾಯಿಕ ಮದುವೆ ಆದವರಿಗೆ ಇರುವಂತಹ ಯಾವುದೇ ಕಟ್ಟುಪಾಡುಗಳ ನಿರೀಕ್ಷೆ ಇಲ್ಲಿ ಇಲ್ಲ . ಒಟ್ಟಿನಲ್ಲಿ ಇದೊಂದು ನಿಯಮ ನಮ್ಮ ಜನರಿಗಲ್ಲ ಎನ್ನಬಹುದು.

ವೈಲೇಶ ಪಿ ಯೆಸ್ ಕೊಡಗು
೪/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು