ಗಝಲ್ : ೩೦

ಗಝ಼ಲ್ : ೩೦
~~~~~~~~
ನಿತ್ಯ ಮೂರು ಹೊತ್ತು ನೊಗವನ್ನೆಳೆದ ಬಸವಣ್ಣ ಯಾರನ್ನೂ ಸಾಕಿದೆ ಎನಲಿಲ್ಲ
ಸತ್ತು ಬದುಕಿ ಹೆತ್ತ ತಾಯಿಯೂ ಎದೆ ಹಾಲು ನೀಡಿ ನಿನ್ನನ್ನು ಸಾಕಿದೆ ಎನಲಿಲ್ಲ

ಸರ್ವ ಕಾಲಕೆ ಚರಾಚರಗಳಿಗೆಲ್ಲಾ ತುತ್ತನಿತ್ತ ಬುವಿ ಎಲ್ಲ ಜೀವಿಗಳ ಸಲಹುತ್ತಿದೆ.
ಕಡಲಾಳದಲ್ಲೂ ಅಡಗಿದ ಸಕಲಕೂ ಬೆಳಕನ್ನಿತ್ತ ಸೂರ್ಯನು ಸಾಕಿದೆ ಎನಲಿಲ್ಲ.

ಉಸಿರ ನೀಡುವ ಹಸಿರ ಜನನಕೆ ಕಾರಣನಾದ ವರುಣನ ಕರುಣೆ ಅಪಾರವಲ್ಲವೇ
ಧರಣಿಯ ಕೃಪೆಯೇ ಮಿಗಿಲೆಂಬ ಮಳೆರಾಯ  ಭುವನದೆಲ್ಲವನೂ ಸಾಕಿದೆ ಎನಲಿಲ್ಲ

ಹತ್ತು ಮಕ್ಕಳನು ಹೊತ್ತ ತಾಯಿಯಿಂದು ಮುಷ್ಟಿ ಅನ್ನಕೆ ಕೈಯ ಚಾಚಿಹಳಲ್ಲವೇ
ಮಕ್ಕಳಿಂದು ತುತ್ತನ್ನಿಕ್ಕದಿದ್ದರೂ ಮಾತು ತಪ್ಪಿಯೂ ತನ್ನವರನ್ನು ಸಾಕಿದೆ ಎನಲಿಲ್ಲ

ಅರೆಬರೆ ಕಲಿತ ಕೋಡಂಗಿಗಳಷ್ಟೇ ಜಗದೊಳು ಎಲ್ಲಾ ಬಲ್ಲಂತಾಡುವರು ಸಖಿ
ನಿಜದಿ ಬಲ್ಲವರು ಅಪ್ಪಿತಪ್ಪಿಯೂ ಎಲ್ಲರೆದುರು ನಾನೆಲ್ಲರನು ಸಾಕಿದೆ ಎನಲಿಲ್ಲ

ಎಂಜಲು ಕೈಯಲ್ಲಿ ಕಾಗೆಯ ಓಡಿಸದವರ ಮಾತುಗಳು ಅದೆಷ್ಟು ಚೆಂದವೇ ಸಖಿ
"ಸಿಡಿಲ"ನನು ಸಾಕಿದ ನೂರಾರು ಅಮ್ಮಂದೀರುಗಳೂ ನನ್ನನ್ನು ಸಾಕಿದೆ ಎನಲಿಲ್ಲ

ವೈಲೇಶ ಪಿ ಯೆಸ್ ಕೊಡಗು
೨೩/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು