ಮನವೇ ಕಳಂಕ
ಮನವೇ ಕಳಂಕ
~~~~~~~~
ಮನವು ಹೊರಳಿ ಹೊಲಸು ಬೆರೆತು
ಕೊಳೆತ ಕಾಮದ ನಾಥವು ಮೊಳೆತು
ಮೊಗ್ಗಿನ ಮನಸ್ಸಿನ ಅಳಿದ ಚೀತ್ಕಾರ
ಅರಳದೆ ಆಕಾರ ಸಮಸ್ತವು ನಕಾರ
ಛಲದ ಬೋಗ ಅಳಿಸಿತು ಸುಯೋಗ
ಅವರಿವರ ಜಿಹ್ವೆಗೆ ಆಲಾಪದ ಯೋಗ
ಯೋಗ್ಯ ಜೀವನಕೆ ಅಲ್ಪಾಯು ರಾಗ
ನೇಣಿಗೇರುವೆ ಅರಿತುಕೋ ಇಂದೀಗ
ಅರಿಯದ ವಯಸ್ಸಿಗೆ ಮೈತ್ರಿಕೆ ಹೂಡಿ
ಬೆಳೆಯ ಮೊಳಕೆಯ ಮೃತ್ತಿಕೆ ಮಾಡಿ
ನಿನ್ನಯ ಜ್ಞಾನಕೆ ವೃತ್ತವನೇ ನಿ ಮಾಡಿ
ತುಂಬಿತ್ತಲ್ಲ ಪಾಪದ ಕೊಡ ಜಾಲಾಡಿ
ಮಾನವ ಜನುಮಕೆ ನಿಮ್ಮದೇ ಕಳಂಕ
ಮುರಿಯೆ ನಿಮ್ಮ ಸಂತತಿಯ ಟೊಂಕ
ನ್ಯಾಯವೆಂಬುದು ಬರೇ ಅಲಂಕಾರಿಕ
ಕಾಯ್ವ ನಿಮ್ಮನು ಸ್ವಾರ್ಥಿ ಚಮತ್ಕಾರಿಕ
ಯಾರೆಷ್ಟು ಉಗುಳಿ ಉಪ್ಪಿಟ್ಟರೇನು
ಅಂದಿಗೂ ಇಂದಿಗೂ ಅಳಿಯಲೊಲ್ಲ
ಕೀಚಕ ಮನದ ಪಾಪಿಷ್ಠ ದುರ್ಜನನು
ಕಲಿಯುಗದ ಅಂತ್ಯ ಆಗಮಿಸಿತೇನು
ವೈಲೇಶ ಪಿ ಯೆಸ್ ಕೊಡಗು
೨೬/೪/೨೦೧೮
Comments
Post a Comment