ಮನೆಯಾಕೆಗೆ ತಿಳಿದಿರಲಿ

ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ. ಅದೊಂದು ಪುಟ್ಟ ಪಟ್ಟಣ ಒಂದು ಪುಟ್ಟ ಸಂಸಾರ ಎಲ್ಲರ ಕಣ್ಣು ಕುಕ್ಕುವ ಹಾಗಿದ್ದ ಜೋಡಿಗಳಿಗೆ ಚಿನ್ನದಂತಹ ಇಬ್ಬರು ಮಕ್ಕಳು. ಇವರದು ಪ್ರೇಮ ವಿವಾಹವಾದ ಕಾರಣ ಎರಡೂ ಕುಟುಂಬದಿಂದ ಹೊರಗಿದ್ದರೂ ಇವರು ರಾಜ ರಾಣಿಯರಂತೆಯೇ ಇದ್ದರು. ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ಒಂದು ದಿನ ಮೂರು ವರ್ಷದ ಗಂಡು ಮಗುವಿಗೆ ಆರೋಗ್ಯ ಹದಗೆಟ್ಟಿತು. ಗಂಡ ಮನೆಯಿಂದ ದೂರದ ಊರಿಗೆ ಕರ್ತವ್ಯ ನಿಮಿತ್ತ ಹೋಗಿದ್ದಾನೆ. ಈಕೆಗೆ ನಾಲ್ಕು ವರ್ಷದ ಹೆಣ್ಣು ಮಗುವಿನೊಂದಿಗೆ ಅಳುವುದನ್ನು ಬಿಟ್ಟರೆ ಬೇರೇನೂ ಗೊತ್ತಾಗುತ್ತಿಲ್ಲ. ಮನದಲ್ಲಿ ಅಂದುಕೊಳ್ಳುತ್ತಾಳೆ ನನ್ನ ಗಂಡ ನನ್ನನ್ನು ಮನೆಯಿಂದ ಹೊರಗೆ ಕಾಲಿಡದಷ್ಟು ಪ್ರೀತಿಯಿಂದ ಸಾಕುತ್ತಿದ್ದಾರೆ. ಆದರೆ ಈ ಮಗುವಿನ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಈ ಊರಿನಲ್ಲಿ ಆಸ್ಪತ್ರೆಗೆ ಹೋಗುವ ದಾರಿ ಯಾವುದು ನಿತ್ಯ ಮಗಳನ್ನು ಅಂಗನವಾಡಿಗೆ ಕರೆದೊಯ್ಯುವ ಆಟೋ ಚಾಲಕನ ದೂರವಾಣಿ ಸಂಖ್ಯೆ ಏನು ಯಾವುದು ಗೊತ್ತಿಲ್ಲ. ಹೋಗಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂದು ಇಂದಿನವರೆಗೂ ನಾನು ಹೋಗಿ ನೋಡಿಲ್ಲ ಏನು ಮಾಡಲಿ ಎಂದು ಅಳುತ್ತಾ ಕುಳಿತಳು. ಅವಳ ಅಳುವನ್ನು ಕಂಡು ಪಕ್ಕದ ಮನೆಯ ರುಕ್ಮಿಣಿ ಆಂಟಿ ಏನಾಯಿತು ಎಂದು ಕೇಳಿ ಮುಂದಿನ ಕೆಲಸ ಕಾರ್ಯಗಳು ಸಾಂಗವಾಗಿ ನಡೆದು ಗಂಡ ಮನೆಗೆ ಬರುವಷ್ಟರಲ್ಲಿ ಎಲ್ಲವೂ ಸುಖಾಂತ್ಯವಾಗಿತ್ತು. ಬೆಂಗಳೂರಿನಲ್ಲಿ ನೌಕರಿ ಹಿಡಿದು ಸತ...