ಮತ ಬೇಧ

ಮತ ಬೇಧ
========
ಪ್ರಾಣಿ ಪಕ್ಷಿಗಳಿಗಿಲ್ಲವೀ ಭಾವ ಬೇದ
ಪಶುಗಳಲ್ಲಿರುವುದು ಕೇವಲ ಪ್ರಬೇಧ
ಮನುಜರಾದ ನಮಗೇಕೆ ಈ ಒಣಬೇದ
ನಿಜಕ್ಕೂ ನಮಗಾಗಬೇಕಿದೆ ಭಾರೀ ಖೇದ

ಜಲಚರಗಳು ಆಹಾರಕಷ್ಟೇ ಕೊಲ್ಲುವವು
ವನ್ಯಜೀವಿಗಳು ಹೊಟ್ಟೆಗೆಂದು ಬೇಟೆಯಾಡುವವು
ಜಗದೊಳು ಅತೀವ ತಿಳಿವಳಿಕೆಯುಳ್ಳವರು ನಾವು
ಧರ್ಮದ ಪೆಸರಲಿ ಅನ್ಯರ ಹತ್ಯೆ ಮಾಡುತ್ತಿರುವೆವು

ಜಗದಿ ಜನಿಸಿದ ಸಕಲವೂ ಅಂತ್ಯಗೊಳ್ಳಬೇಕಿದೆ
ವಿಷಯವದು ನಮ್ಮೆಲ್ಲರರಿವಿಗೆ ಬಾರದಾಗಿದೆ 
ನಾವೇ ಅಳಿದ ಮೇಲೆ ಮತ ಧರ್ಮಕ್ಕೆ ಬೆಲೆಯೇನಿದೆ
ಜಾತಿಯೆಂಬುದು ಬರೀದೇ ಬುರುಡೆಯಾಗಿದೆ

ಧರ್ಮವಾವುದು ಲೋಕದೊಳು ಮಿಗಿಲಲ್ಲ
ಮಹಾನ್ ಗ್ರಂಥಗಳು ಕೊಲ್ಲು ಎನ್ನುವುದಿಲ್ಲ
ಮಾನವ ಧರ್ಮಕೆ ಸರಿ ಸಾಟಿ ಏನೇನಿಲ್ಲ
ಮಾನವೀಯತೆಯೆದುರು ಗೌಣ ಉಳಿದೆಲ್ಲ

ವಿಭಿನ್ನರಾಗೋಣ ನಿಜ ಮಾನವರಾಗೋಣ
ಸಕಲ ಧರ್ಮಗಳು ನಮ್ಮಯ ಒಳಿತಿಗೆ ಎನ್ನೋಣ
ಪರಮತ ಸಹಿಷ್ಣುತೆಯ ಗೀತೆಯ ಹಾಡೋಣ
ಪ್ರಾಣಿಗಳಂತಿರದೇ ಮಾನವೀಯರಾಗೋಣ

ವೈಲೇಶ ಪಿ.ಎಸ್ ಕೊಡಗು
೨೦/೧/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು