ಗಝಲ್ ೪೬

ಗಝಲ್ ೪೬
•~•~•~•~•~•

ಮಣ್ಣಿಂದುದಿಸಿದ ಕಾಯ ಯಾರನೂ ಕಾಯದೇ ನಡೆಯುತಿದೆ ಮಣ್ಣಿನೆಡೆಗೆ
ಮರುಗಿ ತಿರುಗಿ ಬರಲಾರನೆಂಬ ಅರಿವಿದ್ದರೂ ಬದುಕ ತಿರುವಿನೆಡೆಗೆ 

ಶವ ಪೆಟ್ಟಿಗೆಯ ಹೊರಗಿಣುಕಿದ ಕರಗಳನು ಅಸಡ್ಡೆ ಮಾಡಿಕೊಂಡೆವು
ಚಕ್ರವರ್ತಿ ಅಶೋಕನ ನಡೆಗಳ ಕಂಡು ಕಲಿತೆವು ಜಗವೇ ಇರಲೆಮಗೆ

ನಾಮ ನೇಮ ಮದ ಮಾತ್ಸರ್ಯ ಅಸಂಗತ ಸಂಗತಿ ಉಳಿದುಕೊಂಡವು
ಈಶ ಏಸು ಅಲ್ಲಾ ಬುದ್ಧರ ಮಹಾನ್ ಗ್ರಂಥಗಳರ್ಥ ಅರಿಯಲಿಲ್ಲವೆಮಗೆ

ನಾವೇ ಕಲಿತವರು ಎಂದು ಬೀಗುತಾ ಬಾಗುವುದ ನಾವಿಂದು ಮರೆತಿಹೆವು
ಭರಪೂರ ಜೀವನವ ವಿದ್ಯಾರ್ಜನೆಗೆ ಮುಡುಪಿಟ್ಟವರ ಅರಿಯದೆಮಗೆ

ಸಿಡಿಲನ ಮನವಿಂದು ರೋಧಿಸುತಿದೆ ನಮಗೆ ನಾವೇ ವಂಚಕರಾದೆವೆಂದು
ಏನರಿಯದ ಅನಾಮಿಕ ಶವವನು ಹೊತ್ತು ನಡೆದಿರುವೆವು ಮಸಣದೆಡೆಗೆ

"ಸಿಡಿಲ"
ವೈಲೇಶ ಪಿ ಎಸ್ ಕೊಡಗು
೭/೧/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು