ಜಗಕಾದರ್ಶವಾಗಲಿ

ಜಗಕಾದರ್ಶವಾಗಲಿ
•••••••••••••••••••••
ಬನದ ಪೂರ್ಣಿಮೆಯ ದಿವಸ 
ಸ್ವಾಮೀಜಿ ಬುವಿ ಸೇರುವ ಮನಸ
ಮಾಡಿ ಬೇಡಿದರು ಈಶನಲಿ ಖಾಸ
ಶ್ರೀಗಳ ಬೇಡಿಕೆಗಾಗಲಿಲ್ಲ ಮೋಸ

ಕುಂಭ ಮೇಳವನು ಕಾಣಲೆಂದು
ಪಾರ್ವತಿಯೊಡಗೂಡಿ ಬಂದರೋ
ಜಗದೊಡೆಯ ನಡುವೆ ಭೂಕೈಲಾಸ
ಸಿದ್ದಗಂಗೆಯ ಬೆಳಕನು ಕಾಣಲೆಂದು

ಅತ್ತಲಿಂದ ಮೆತ್ತನೆಯ ತನ್ನದೇ ಧ್ಯಾನ
ಕಾಯಕದಿ ಕಾಯವೇ ಸವೆದ್ಹೋಗಿದೆ
ಕಾಯೋ ಕೈಲಾಸ ವಾಸ. ಸಾಕಾಗಿದೆ
ಸಹವಾಸ ಕಳೆದು ಸುಧೀರ್ಘಾಯುಷ್ಯ

ಶಿವನ ಕರೆಗೆ ಜವರ ಬಂದನು ಶಿರಬಾಗಿ
ನಿಂದವನ ಹರ ಕೇಳಿದ ಏಕೆಂದು ಬೆರಗಾಗಿ
ಯಮನೆಂದ ತಂದೆ ಬಂದಾಗ ಬರಲೆಂದು
ನೀನುಲಿದಾಜ್ಞೆಯನು ಪಾಲಿಸಿದೆಯೆಂದು

ಶುಭದಿನವಿಂದು ಕರೆದೊಯ್ಯು ಆತ್ಮವನು
ಲೀನವಾಗಲಿ ದೇಹ ಭೂದೇವಿ ಮಡಿಲಲಿ
ಅದರಿಂದುದಿಸಿದ ಕಣ ಕಣದಲಿ ಜನಿಸಲಿ
ಶಿವಕುಮಾರರೇಣ್ಯರು ಜಗಕಾದರ್ಶವಾಗಲಿ

ವೈಲೇಶ ಪಿ ಎಸ್ ಕೊಡಗು
೨೧/೧/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು