Posts

ಬಾಡ ಕನಕನ ನೋಡ

ಬಾಡ ಕನಕನ ನೋಡ ~~~~~~~~~~~ ಹಾವೇರಿ ಜಿಲ್ಲೆಯ ಬಾಡ ಉದಿಸಿತು ರತ್ನವು ನೋಡ ಕುರಿ ಮಂದೆ ಸಹವಾಸ ಬೇಡ ಹರಿ ಮುಂದೆ ಸಾಹಸ ನೋಡ ದಾಸರ ದಾಸರು ಈ ಕನಕ ದಾಸ ಸಾಹಿತ್ಯಕೆ ಈ ಪೋಷಕ ಹರಿನಾಮ ಈತಗೆ ಧನ ಕನಕ ಕನ್ನಡಮ್ಮನ ಕಿರೀಟದ ಕನ...

ಬಾ ಬಾ ರತಿ

ಬಾ ಬಾ ರತಿ ~~~~~~~ ಆ ಮರ ಮರೆತಿದೆ ಮರ್ಮರ ತಾ ಕೇಳದೇ ನಿನ್ನಯ ಸುಸ್ವರ ನವಿಲದು ನಾಟ್ಯವ ಮರೆತಿದೆ ದಿನವೂ ಕಾಣದೆ ದೇನಿಸುತ್ತಿದೆ ಯಾರೇ ಕುಳಿತರೂ ಹಿತವೆನಿಸದು ನಿನ್ನ ದಾವಣಿಯಂಚು ಸೋಂಕಿದರೆ ಸಾಕೆಂದಿದೆ ಉದ್ಯಾನದ ಕಲ್ಲುಬೆಂಚು ವನ ಕಾದಿದೆ ಗೆಜ್ಜೆ ಧನಿಗೆ ಇಂಚಿಂಚು ನಿನ್ನ ಕಾಣದೆ ಬಳ್ಳಿಗೆ ಬಂದಿದೆ ಜಂಭ ಬೇಗ ಧರೆಗಿಳಿದು ಬಾ ಬಾರೇ ರಂಭ ಬಾ ಬಾ ಭಾರತಿ ಕಾದಿದೆ ನಿನಗಾರತಿ ಬಾ ಬಾ ಬಾ ರತಿ ನೀನೇ ಎನಗೆ ಗತಿ ಖಕಮಿಗ ಸವಿಯಲು ನಿನ್ನಂದಚಂದ ನಿತ್ಯ ನಗೆ ಮಲ್ಲಿಗೆಯ ವದನಾರವಿಂದ ತನುಮನಕೆ ಮಿಗೆ ತರಲಿ ಸಿಹಿ ಆನಂದ ನಿನ್ನೊಲವು ನೀಡುತಾ ಸವಿ ಮಕರಂದ ವೈಲೇಶ ಪಿ ಯೆಸ್ ಕೊಡಗು ಕರಾರಸಾಸಂಸ್ಥೆ ಮಡಿಕೇರಿ ಚಾಲಕ ೬/೧೧/೨೦೧೭

ಚುಟುಕು ಗುಟುಕು

ಚುಟುಕು ಗುಟುಕು ~~~~~~~~~~ ಮಲ್ಲಿಗೆ ~~~~~ ಮನದ ಮಲ್ಲಿಗೆ ಅರಳಿದೆ ಮೆಲ್ಲಗೆ ಬುಡದ ಮುಳ್ಳಿಗೆ ಬೆದರಿದೆ ಒಳಗೆ ಕವಿಮನಗಳ ಗೀಚಿದ ಕವಿತೆಗಳಿಗೆ  ತಾನರಿಯದೇ ನೀಡಿದೆ ರಸಘಳಿಗೆ ಕವಿತೆ ~~~~ ಕವಿತೆ ಇತ್ತು ಬ್ಯಾಗಿನೊಳಗೆ ...

ನುಡಿ ಮನ ನಿನ್ನತನ

ನುಡಿ ಮನ ನಿನ್ನತನ ~~~~~~~~~~ ನುಡಿದು ಬಿಡು ಗೆಳೆಯ ನಿನ್ನ ಮನದ ಭಾವನೆಗಳ ಅರುಹಿ ಬಿಡು ಒಡೆಯ ಅಧರ ತಂದ ಬಯಕೆಗಳ ಮನದ ಮೂಸೆಯಲ್ಲಿ ಹೊಸೆದ ಹೊಸ ಹೊಸ ಹೂ ಮನದ ನಗೆಗಳ ಬಗೆ ಬಗೆಯ ನಗೆಬುಗ್ಗೆಗಳ ಬಾಲ್ಯ ಮುಚ್ಚಿದ ಮನದಾಸ...

ಬೇಗನೆ ಸುರಿಸು

ಕಾದಿಹಳು  ಭೂದೇವಿ ಬಾರದ ಮಳೆಯ ನೆನೆದು ಒಡಲಲ್ಲಿ ಬೀಜವ ಒಗೆದ ರೈತಗೆ ದ್ರೋಹವ ಬಗೆದು ಓಡಿ ಹೋದನೇ ಎಂದು              ಮಳೆಯ ನೀರನು ನಂಬಿ ಅಳಿದುಳಿದ ಬಂಡವಾಳವ ತುಂಬಿ ಅಸೀಮ ರೂಪಿ ಅಂಬರವನು ಆಸೆಗಣ್ಣಿ...

ಧನ್ಯತೆ

ಧನ್ಯತೆ ~~~~ ದಟ್ಟಡವಿಯ ನಟ್ಟನಡುವೆ ಹುಲುಸಾಗಿ ಬೆಳೆದ ಹೆಬ್ಬಲಸು ಹೆಮ್ಮರದ ನಡುಗೊಂಬೆಯ ಹಣ್ಣೆಲೆ ಉದುರಿದ ಕಂಡ ಅದೇ ಮರದಬುಡದಲ್ಲಿ ಆಗತಾನೆ ಚಿಗುರೊಡೆಯುತ್ತಿದ್ದ ಎಳೆಗಿಡದ ಸುಳಿ ಚಿಗುರು ನಗುತ್ತಿತ...

ನಾ ಕೆಂಪು ಬಸ್ಸು

ನಾ ಕೆಂಪು ಬಸ್ಸು ~~~~~~~~~ ದಿನ ದಿನವೂ ದುಡಿದು ಬಸವಳಿಯುತ್ತಿದ್ದೆ ಕ್ಷಣ ಕ್ಷಣವೂ ನಡೆದು ನಲಿದಾಡುತ್ತಿದ್ದೆ ಹೀಗೆ ಹೋಗಿ ಹಾಗೆ ಬಂದು ಮತ್ತೆ ಮತ್ತೆ ಬಂದು ಹೋಗಿ ದುಡಿಮೆ ಮಾಡುತ್ತಿದ್ದೆ ||ಪ|| ಯಾರೋ ಮಾಡಿದ ತಪ್...