ಬಾಡ ಕನಕನ ನೋಡ

ಬಾಡ ಕನಕನ ನೋಡ
~~~~~~~~~~~

ಹಾವೇರಿ ಜಿಲ್ಲೆಯ ಬಾಡ
ಉದಿಸಿತು ರತ್ನವು ನೋಡ
ಕುರಿ ಮಂದೆ ಸಹವಾಸ ಬೇಡ
ಹರಿ ಮುಂದೆ ಸಾಹಸ ನೋಡ

ದಾಸರ ದಾಸರು ಈ ಕನಕ
ದಾಸ ಸಾಹಿತ್ಯಕೆ ಈ ಪೋಷಕ
ಹರಿನಾಮ ಈತಗೆ ಧನ ಕನಕ
ಕನ್ನಡಮ್ಮನ ಕಿರೀಟದ ಕನಕ

ಕುಲ ಕುಲ ಕುಲವೆಂಬ ಮನಕೆ
ಕುಲವಿಲ್ಲ ಮನುಜ ಸಂಕುಲಕೆ
ಎಂಬುದ ಮಾಡಿದರು ಅರಿಕೆ 
ಮುನ್ನುಡಿಯು ಸತ್ಯ ದರ್ಶನಕೆ

ಅಳಿಸಿ ಜಾತಿ ವಿಜಾತಿ ತರತಮ
ಹಣತೆ ಹಚ್ಚಿ ಸರಿಸಿ ಜಗದ ತಮ
ಅಂದಿನ ಕಾಲಕೆ ಕೃತಿಗಳು ಉತ್ತಮ
ದಾರ್ಶನಿಕರು ಇವರೇ ಅತ್ಯುತ್ತಮ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೬/೧೧/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ