ಬೇಗನೆ ಸುರಿಸು
ಕಾದಿಹಳು ಭೂದೇವಿ
ಬಾರದ ಮಳೆಯ ನೆನೆದು
ಒಡಲಲ್ಲಿ ಬೀಜವ ಒಗೆದ
ರೈತಗೆ ದ್ರೋಹವ ಬಗೆದು
ಓಡಿ ಹೋದನೇ ಎಂದು
ಮಳೆಯ ನೀರನು ನಂಬಿ
ಅಳಿದುಳಿದ ಬಂಡವಾಳವ ತುಂಬಿ
ಅಸೀಮ ರೂಪಿ ಅಂಬರವನು
ಆಸೆಗಣ್ಣಿನಿಂ ರೈತ ದೃಷ್ಟಿಸಿದನು
ಮೋಡದ ತುಣುಕ ಸುಳಿವೂ ಕಾಣದಾದನು
ಬೆಳೆಗಳೆಲ್ಲ ತೆನೆಯೊಡೆಯುವ ಸಮಯ
ನೀರಿಲ್ಲದೇ ಬೆಳಯ ಪಾಡು ಅಯೋಮಯ
ಈಗಲೂ ಮಿಂಚಿಲ್ಲ ಕಾಲ ಸುಸಮಯ
ಒಡನೇ ಓಡೋಡಿ ಬಾರೋ ಮಳೆರಾಯ.
ಜಗದ ಜೀವಕೆ ಆಸರೆ ನೀನು
ತುಂಬಬಾರದೇ ಬೇಗ ಬಾನು
ನೀನಲ್ಲದೇ ಇಹದ ಯಾರೂ
ಜಗದ ಕೊಳೆಯ ತೊಳೆಯಲಾರರು
ಬೇಗನೆ ಸುರಿಸು ಜಳಜಳ ನೀರು
ವೈಲೇಶ ಪಿ ಯೆಸ್
ಕೆ. ಬೋಯಿಕೇರಿ
ವಿರಾಜಪೇಟೆ ಕೊಡಗು
9481883194
Comments
Post a Comment