ಧನ್ಯತೆ
ಧನ್ಯತೆ
~~~~
ದಟ್ಟಡವಿಯ ನಟ್ಟನಡುವೆ ಹುಲುಸಾಗಿ ಬೆಳೆದ ಹೆಬ್ಬಲಸು
ಹೆಮ್ಮರದ ನಡುಗೊಂಬೆಯ ಹಣ್ಣೆಲೆ ಉದುರಿದ ಕಂಡ
ಅದೇ ಮರದಬುಡದಲ್ಲಿ ಆಗತಾನೆ ಚಿಗುರೊಡೆಯುತ್ತಿದ್ದ
ಎಳೆಗಿಡದ ಸುಳಿ ಚಿಗುರು ನಗುತ್ತಿತ್ತು.
ಪಾಪ ಅದರಿಯದು ತನಗೊಂದು ದಿನ ಇದೆ ಗತಿಯೆಂದು.
ಆದರೆ ತಾ ಹುಟ್ಟಿ ಬೆಳೆದನುದಿನವೂ ರವಿಕಿರಣಗಳ ಪಿಡಿದಿಡಿದು ಎನಗಾಹಾರವ ಗೈಯ್ಯೆ ಶ್ರಮವುಂಡು ಜಾರಿ ಬಿದ್ದೆಲೆಯ ಕಂಡು ಮಮ್ಮಲ ಮರುಗಿತು ಮರ.
ಹುಟ್ಟಿದಾರಭ್ಯ ಮಂಜಿನಿಂದಾವೃತ ಗೊಂಡು ನೆಸರನ ನಸುನಗುವಿನಲ್ಲಿ ಹುರುಪುಗೊಂಡು ಉರಿಕಿರಣಗಳನುಂಡು
ತರಿದು ಬಿದ್ದರೂ ಮರದ ಬುಡಕ್ಕೆ ಅಹಾರವಾಗುವ ಧನ್ಯತೆಯ
ನೆನೆದು ಪುಳಕಗೊಂಡಿತು ತರಗೆಲೆಯು.
Comments
Post a Comment