ಚುಟುಕು ಗುಟುಕು

ಚುಟುಕು ಗುಟುಕು
~~~~~~~~~~
ಮಲ್ಲಿಗೆ
~~~~~
ಮನದ ಮಲ್ಲಿಗೆ ಅರಳಿದೆ ಮೆಲ್ಲಗೆ
ಬುಡದ ಮುಳ್ಳಿಗೆ ಬೆದರಿದೆ ಒಳಗೆ
ಕವಿಮನಗಳ ಗೀಚಿದ ಕವಿತೆಗಳಿಗೆ 
ತಾನರಿಯದೇ ನೀಡಿದೆ ರಸಘಳಿಗೆ

ಕವಿತೆ
~~~~
ಕವಿತೆ ಇತ್ತು ಬ್ಯಾಗಿನೊಳಗೆ ಅವಿತೆ
ಕವಿತೆ ಬರೆದು ನಾನಾಗಲೇ ಮರೆತೆ
ಕವಿತೆ ಓದಲು ವೇದಿಕೆ ಏರಿ ಸೋತೆ
ಕಿವಿಯ ಜೊತೆ ನಗೆಗಡಲಲ್ಲಿ ಬೆರೆತೆ

ನಗೆ ಬಗೆ
~~~~~
ನಗೆಯೊಳು ನಲಿದಿಹುದು ಹಲ ಬಗೆ
ಮುಖದ ತುಂಬಾ ಮುಗುಳು ನಗೆ
ಮನದಲ್ಲಿ ಹಗೆ ಮುಖದಲ್ಲಿ ನಗೆ
ಸಖಿಯ ಮೋಹಕ ನಗೆ ಸಖರು ಹೊಗೆ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೬/೧೧/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ