ನುಡಿ ಮನ ನಿನ್ನತನ

ನುಡಿ ಮನ ನಿನ್ನತನ
~~~~~~~~~~

ನುಡಿದು ಬಿಡು ಗೆಳೆಯ
ನಿನ್ನ ಮನದ ಭಾವನೆಗಳ
ಅರುಹಿ ಬಿಡು ಒಡೆಯ
ಅಧರ ತಂದ ಬಯಕೆಗಳ

ಮನದ ಮೂಸೆಯಲ್ಲಿ
ಹೊಸೆದ ಹೊಸ ಹೊಸ
ಹೂ ಮನದ ನಗೆಗಳ
ಬಗೆ ಬಗೆಯ ನಗೆಬುಗ್ಗೆಗಳ

ಬಾಲ್ಯ ಮುಚ್ಚಿದ ಮನದಾಸೆಯ
ಭಾವ ತರಂಗದ ರಂಗ ಗೀತೆಯ
ಇನಿಯಳೊಡನಾಡಿದ ಮಿಥ್ಯೆಯ
ನುಡಿದ ಹಸಿ ಪೊಳ್ಳು ಭರವಸೆಯ

ನಿರಾಳವಾಗಲಿ ಸೋತ ತನು ಮನ
ಕಳೆದುಕೊಳ್ಳದಿರು ಮತ್ತೆ ನಿನ್ನತನ
ಮರೆತು ಬಿಡು ಕೆಲಕ್ಷಣ ಮನೆತನ
ಅಂತ್ಯವಾಗಲಿ ಮನದ ತಿಕ್ಕಲುತನ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೫/೧೧/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ