ನಾ ಕಂಡಂತೆ ಕವಿ ಸಾಹಿತಿ ಕಲಾವಿದರು:- ಕೋಮಲ ಕಮರವಾಡಿ.

ನಾ ಕಂಡಂತೆ ಕವಿ ಸಾಹಿತಿಗಳು. ಮಾಲಿಕೆ:-
ಕೋಮಲ ಕಮರವಾಡಿ

 ನಾ ಕಂಡಂತೆ ಕವಿ ಸಾಹಿತಿಗಳು. ಮಾಲಿಕೆ:- ಕೋಮಲ ಕಮರವಾಡಿ.


ಇವರು ಕೋಮಲ ಕಮರವಾಡಿ.

ಚಾಮರಾಜನಗರದ ಕಮರವಾಡಿ ಗ್ರಾಮದ ಮಹದೇವಸ್ವಾಮಿಯವರ ಧರ್ಮಪತ್ನಿ ಶ್ರೀಮತಿ ಕೋಮಲ ಕಮರವಾಡಿ. ಇವರು ಚಾಮರಾಜ ನಗರದ ಮಹದೇವಪ್ಪ ಮತ್ತು ರಾಜಮ್ಮ ದಂಪತಿಯ ಪುತ್ರಿ. ಎಳವೆಯಿಂದಲೂ ಓದುವ ಹವ್ಯಾಸವನ್ನು ಬೆಳೆಸಿಕೊಂಡವರು. ಮುಂದೆ ಅದು ಬರವಣಿಗೆಯಾಗಿ ತಂತಾನೇ  ತಿರುಗಿಕೊಂಡಿತು.

       ಕಥೆ, ಕವನ ,ಹನಿಗವನ ಚುಟುಕು ಭಾವಗೀತೆ, ಶಿಶುಗೀತೆ, ಮಕ್ಕಳ ಪದ್ಯ, ಗಝಲ್, ರುಬಾಯಿ, ಟಂಕಾ ಮುಂತಾದ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಓದುವ ಮತ್ತು ಬರೆಯುವುದನ್ನು ಹವ್ಯಾಸವಾಗಿ ಬದಲಾಯಿಸಿಕೊಂಡರು. ಆಕಾಶವಾಣಿಯ ವಿವಿಧ ನಿಲಯಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಜೊತೆಗೆ ಚಿತ್ರಕಲೆಯಲ್ಲಿ ಆಚಾರ್ಯ ಚಿತ್ರಕಲಾ ಭವನದಲ್ಲಿ 2 ವರ್ಷಗಳ ಕಾಲ ಅಂಚೆ ಮೂಲಕ ತರಬೇತಿ ಪಡೆದಿದ್ದಾರೆ.

             ಇವರ ಕವನಗಳು ಹಲವಾರು ಸಂಪಾದಿತ ಕವನ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕವಿಗೋಷ್ಟಿಗಳಲ್ಲಿ ಕವನ ವಾಚನ ಮಾಡಿರುತ್ತಾರೆ

ದಸರಾ ಕವಿಗೋಷ್ಟಿಯಲ್ಲಿ ಭಾಗವಹಿಸಿ ಪ್ರಶಸ್ತಿಪತ್ರ ಪಡೆದಿರುತ್ತಾರೆ. ಹಲವಾರು ಅಂತರ್ಜಾಲ ಬಳಗಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಮೆಚ್ಚುಗೆ ಪಡೆದಿರುತ್ತಾರೆ.  ವಾಟ್ಸ್ ಆಪ್ ಬಳಗ ಗುರುಕುಲ ಚಾಮರಾಜನಗರದ ಜಿಲ್ಲಾಧ್ಯಕ್ಷರಾಗಿ ಕೆಲಸ ನಿರ್ವಹಿಸಿರುವ ಇವರು ಬಳಗದಲ್ಲಿ ಪ್ರತಿವಾರವೂ ಸಾಹಿತ್ಯದ ಹಲವಾರು ವಿಷಯಗಳಲ್ಲಿ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ. ಗುರುಕುಲ ಕಲಾಪ್ರತಿಷ್ಟಾನ ತುಮಕೂರು ರಾಜ್ಯಘಟಕದಿಂದ "ಗುರುಕುಲ ಕಲಾ ಕುಸುಮ" "ಗುರುಕುಲ ಸಾಹಿತ್ಯ ಶಿರೋಮಣಿ" ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಕೊಡಗು ಜಿಲ್ಲೆಯ ಸಾಹಿತ್ಯ ಸಂವರ್ಧಕ ಪರಿಷತು ಬಳಗದಲ್ಲಿ ಪ್ರಧಾನ ರಾಜ್ಯ ಸಂಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಓಂ ಬಳಗದ ತೀರ್ಪು ಬಳಗದಲ್ಲಿದ್ದು ಸಲಹೆ ಸೂಚನೆಗಳನ್ನು ಕೊಡುತ್ತಿರುವ ಇವರು ಕೊಡಗು ಜಿಲ್ಲೆಯ ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು ಬಳಗದ ವತಿಯಿಂದ ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಹಿಳಾ ಲೋಕ ಮತ್ತು ವನಿತಾ ವಿಹಾರ  ಕಾರ್ಯಕ್ರಮದಲ್ಲಿ ಅಂತರ್ಜಾಲದ ಮೂಲಕ ಕವನ ವಾಚಿಸಿದ್ದಾರೆ. 


              "ನಾನು ಎಸ್ ಎಸ್ ಎಲ್ ಸಿಯವರೆಗಷ್ಟೇ ಓದಿರುವುದು. ಆದರೆ ಉತ್ತಮೋತ್ತಮ ಲೇಖಕರ ಕಾದಂಬರಿಗಳು, ಕಥಾ ಸಂಕಲನಗಳು ಮತ್ತು ಅನೇಕ ಮಹಾತ್ಮರ ಕೃತಿಗಳನ್ನು ಓದಿ ತನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಸುಧಾ,ತರಂಗ ,ಲಂಕೇಶ್ ಪತ್ರಿಕೆಗಳ ಓದು ನನ್ನ ಜ್ಞಾನಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿವೆ. ನನ್ನೆಲ್ಲ ಪುಸ್ತಕದ ಹಸಿವನ್ನು ಅರಿತು ಕೇಳಿದಾಗಲೆಲ್ಲಾ ನನಗೆ ಪುಸ್ತಕಗಳನ್ನು ಖರೀದಿಸಿ ತಂದುಕೊಟ್ಟು ಜ್ಞಾನದ ಹಸಿವು ನೀಗಿಸುತಿದ್ದ ನನ್ನ ಪತಿಯವರನ್ನು ನಾನಿಲ್ಲಿ ಮನಃಪೂರ್ವಕವಾಗಿ ಸ್ಮರಿಸಲು ಇಷ್ಟಪಡುವೆ" ಎನ್ನುತ್ತಾರೆ. 

             ಇವರಿಗೆ ಇಬ್ಬರು ಮಕ್ಕಳು ಮೊದಲನೆಯವನು ಮಗ. ಇಂಗ್ಲೀಷ್ ಎಂ ಎ. ಪದವಿ ಪಡೆದು ಬಿ ಎಡ್  ಕೂಡ ಮುಗಿಸಿ ಸಧ್ಯಕ್ಕೆ ಬೆಂಗಳೂರಿನ ಬಿ ಎಂ ಟಿ ಸಿ ಯಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿವಾಹಿತರಾಗಿದ್ದಾರೆ. ಕೋಮಲರವರ ಮಗಳಿಗೆ ಇಬ್ಬರೂ ಹೆಣ್ಣು ಮಕ್ಕಳಿದ್ದಾರೆ. ಮೊದಲನೆಯವಳು ಮೂರನೇ ತರಗತಿ ಹಾಗೂ ಎರಡನೆಯವಳಿಗೆ ಒಂದೂವರೆ ವರ್ಷ ವಯಸ್ಸು. ಶ್ರೀಮತಿ ಕೋಮಲ ಅಮರವಾಡಿಯವರು ಸಾಕಷ್ಟು ಬರವಣಿಗೆಗಳಲ್ಲಿ ಪಳಗಿದ್ದರೂ ಸಹ ಸ್ವಂತ ಕೃತಿಯನ್ನು ಇನ್ನು ರಚಿಸಲಾಗಿರುವುದಿಲ್ಲ. ವಯೋವೃದ್ದ ತಾಯಿ ಹಾಗೂ ತನ್ನ ಬದುಕಿಗಾಗಿ ಸಾಕಷ್ಟು ಆಸ್ತಿಪಾಸ್ತಿ ಇದ್ದರೂ ಸಹ ದರ್ಜಿಯಾಗಿ ದುಡಿಯುತ್ತಿದ್ದಾರೆ. ನಡುವೆ ಸಾಹಿತ್ಯದ ಸೇವೆಯನ್ನು ಮಾಡುತ್ತಾ ಸುಮಾರು ನಾಲ್ಕಾರು ಕೃತಿಗಳಿಗಾಗುವಷ್ಟು ಸಾಹಿತ್ಯದ ರಚನೆ ಇವರ ಬಳಿ ಇದೆ ಆದರೆ ಕೃತಿಯನ್ನು ರಚಿಸುವಷ್ಟು ಆರ್ಥಿಕ ಸಾಮರ್ಥ್ಯ ಇರುವುದಿಲ್ಲ ಎಂಬ ಕಾರಣಕ್ಕೆ ಕೃತಿ ರಚಿಸದೆ ಹಾಗೆಯೇ ಉಳಿದಿದೆ.ಮುಂದೆ ಇವರ ಕೃತಿಗಳು ಸಾಲಾಗಿ ಬೆಳಕು ಕಾಣುವುದೆಂದು ನಾವು ಆಶಿಸೋಣ.. ಇವರ ಮುಂದಿನ ಬದುಕು ಬರಹಗಳು ಇನ್ನಷ್ಟು ಜನಪ್ರಿಯತೆ ಗಳಿಸಲಿ ಎಂದು ಹಾರೈಸೋಣ 

ಲೇಖಕರು


ವೈಲೇಶ್ ಪಿ ಎಸ್ ಕೊಡಗು

೮/೧೧/೨೦೨೪( ನವೀಕೃತ)


ಇವರ ವಿಳಾಸ

ಕೋಮಲ ಕಮರವಾಡಿ

W/o ಮಹದೇವಸ್ವಾಮಿ ಆರ್ ಕಮರವಾಡಿ

ಬಾನಳ್ಳಿ ಪೋಸ್ಟ್ ಸಂತೇಮರಹಳ್ಳಿ ಹೋಬಳಿ

ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ

ಪಿನ್ ಕೋಡ್ :- 571124

Comments

  1. ಇವರ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಂಡು ಕನ್ನಡಮ್ಮನ ಸೇವೆ ಸತತ ನಡೆಯಲೆಂದು ಹಾರೈಸುತ್ತೇನೆ


    ReplyDelete
  2. ಅಭಿನಂದನೆಗಳು ಮೇಡಂ. ಅತ್ಯುತ್ತಮ ಸಾಹಿತ್ಯ ಕಲಾವಿದೆ ನೀವು..ನಿಮ್ಮ ಸಾಹಿತ್ಯ ಕೃಷಿ ಮತ್ತು ಸಾಹಿತ್ಯ ಸೇವೆ ನಿರಂತರ ಸಾಗಲಿ. ಶುಭವಾಗಲಿ ಮೇಡಂ 🙏🏽💐

    ReplyDelete

Post a Comment

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು