ಜಪವಾಗಲಿ
ಜಪವಾಗಲಿ
~~~~~~
ವಿಶ್ವ ಅಮ್ಮನ ದಿನವಂತೆ ಇಂದು
ಅಮ್ಮನೇ ವಿಶ್ವ ಎಂದರಿತವರಿಗೆ
ಅಮ್ಮನಿಗಿಂತ ವಿಶ್ವವೇ ಇಲ್ಲವಂತೆ
ವಿಶ್ವನಾಥನ ಕೃಪೆಯಿದ್ದರೆ ಸಾಲದು
ಕಂದಗೆ ಅಮ್ಮನ ಬಲವಿರಬೇಕಂತೆ
ಗಣಪನಿಗೂ ಅಪ್ಪ ಅಮ್ಮನೇ ವಿಶ್ವ
ಎಂದು ಸಾರಿದ ನೆನಪು ನಮಗಿರೆ
ದೇವಾನುದೇವರು, ವೀರಾದಿವೀರರು,
ರಾಜ ಮಹಾರಾಜರು, ಪ್ರಧಾನರು,
ಅಮ್ಮನೆದುರು ಮಕ್ಕಳಾದವರು
ವಿಶ್ವದೆಲ್ಲಕೂ ಒಂದೊಂದು ದಿನವಿರಲಿ
ಅಮ್ಮನೆಂದಿಗೂ ನಮ್ಮ ಜೊತೆಗಿರಲಿ
ನಮಗೆ ವಿಶ್ವವನು ತೋರಿದಾಕೆ ಅಮ್ಮ
ತೋರಬೇಕಿದೆ ನಾವಮ್ಮನಿಗೆ ವಿಶ್ವಾಸ
ಅಮ್ಮನಿಂದಲೆಮಗೆ ಉಚ್ವಾಸ ನಿಶ್ವಾಸ
ಜೀವವಿತ್ತರು ಅಪ್ಪ ಜನ್ಮವಿತ್ತರು ಅಮ್ಮ
ಮುಪ್ಪಿನಲ್ಲವರ ಸಲಹುವುದು ಧರ್ಮ
ದೇವರನು ಒಂದು ದಿನ ನೆನೆದರೆ ಸಾಕೆ
ಅಪ್ಪ ಅಮ್ಮರ ನೆರಳು ತೊರೆಯಲೇಕೆ
ಅಮ್ಮನ ದಿನ ಅನುದಿನ ಜಪವಾಗಲಿ
ವೈ.ಕೊ.
ವೈಲೇಶ ಪಿ ಎಸ್ ಕೊಡಗು
೧೨/೫/೨೦೧೯
Comments
Post a Comment