ಬಾ ಬಾ ರತಿ
ಬಾ ಬಾ ರತಿ
~~~~~~~
ಆ ಮರ ಮರೆತಿದೆ ಮರ್ಮರ
ತಾ ಕೇಳದೇ ನಿನ್ನಯ ಸುಸ್ವರ
ನವಿಲದು ನಾಟ್ಯವ ಮರೆತಿದೆ
ದಿನವೂ ಕಾಣದೆ ದೇನಿಸುತ್ತಿದೆ
ಯಾರೇ ಕುಳಿತರೂ ಹಿತವೆನಿಸದು
ನಿನ್ನ ದಾವಣಿಯಂಚು ಸೋಂಕಿದರೆ
ಸಾಕೆಂದಿದೆ ಉದ್ಯಾನದ ಕಲ್ಲುಬೆಂಚು
ವನ ಕಾದಿದೆ ಗೆಜ್ಜೆ ಧನಿಗೆ ಇಂಚಿಂಚು
ನಿನ್ನ ಕಾಣದೆ ಬಳ್ಳಿಗೆ ಬಂದಿದೆ ಜಂಭ
ಬೇಗ ಧರೆಗಿಳಿದು ಬಾ ಬಾರೇ ರಂಭ
ಬಾ ಬಾ ಭಾರತಿ ಕಾದಿದೆ ನಿನಗಾರತಿ
ಬಾ ಬಾ ಬಾ ರತಿ ನೀನೇ ಎನಗೆ ಗತಿ
ಖಕಮಿಗ ಸವಿಯಲು ನಿನ್ನಂದಚಂದ
ನಿತ್ಯ ನಗೆ ಮಲ್ಲಿಗೆಯ ವದನಾರವಿಂದ
ತನುಮನಕೆ ಮಿಗೆ ತರಲಿ ಸಿಹಿ ಆನಂದ
ನಿನ್ನೊಲವು ನೀಡುತಾ ಸವಿ ಮಕರಂದ
ವೈಲೇಶ ಪಿ ಯೆಸ್ ಕೊಡಗು
ಕರಾರಸಾಸಂಸ್ಥೆ ಮಡಿಕೇರಿ
Comments
Post a Comment