ಜಲಪಾತ ಕವಿಗೋಷ್ಠಿ
ಇರ್ಪು ಕವಿಗೋಷ್ಠಿ
~~~~~~~~~~
ರುದ್ರ ರಮಣೀಯ ಜಲ ನರ್ತನ
ಪುಳಕಗೊಂಡಿತು ನಮ್ಮ ಕವಿಮನ
ಅರಳುತಿದೆ ನಿಸರ್ಗದ ಮಡಿಲೊಳು
ಕಂಪು ಪಸರಿಸುವ ಮಲ್ಲಿಗೆ ಮೊಲ್ಲೆಯ
ನಡುವೆ ಅರಳುತ್ತಿದೆ ನಮ್ಮ ಕಲೆಗಾರ
ಸತೀಶ್ ರವರ ಕುಂಚದಲಿ ಮಿಂಚುತಿದೆ
ಜಲಪಾತದ ಶ್ರೀಮಂತ ಚಿತ್ರಪಟ
ಹಿನ್ನಲೆಯಿದೋ ಕೊಡಗಿನ ಖ್ಯಾತ
ಗಾಯಕ ಮೋಹನ್ ರವರ ಮೋಹಕ
ರಾಗದೊಳು ಬೆರೆಯುತ್ತಿದೆ ಇರ್ಪು
ಜಲಪಾತದ ಜುಳು ಜುಳು ಇಂಪಾದ
ಜಲ ನೃತ್ಯೋತ್ಸವ ನೆರೆದ ಕವಿಮನಗಳಿಗೆ
ಆನಂದವನ್ನೀಯುತ್ತಿದೆ ಧನ್ಯವಾಯಿತು
ಕೊಡಗಿನ ಇರ್ಪು ಜಲಪಾತ ಕವಿಗೋಷ್ಢಿ
ವೈಲೇಶ ಪಿ ಯೆಸ್ ಕೊಡಗು
Comments
Post a Comment