ಮೂಲನಿವಾಸಿಗಳು
ಮೂಲನಿವಾಸಿಗಳು
~~~~~~~~~~
ಬುವಿಯ ಮೂಲನಿವಾಸಿಗಳು ಇವು
ಮಾನವರಿಗೂ ಮುನ್ನವೇ ಅವತರಿಸದವು
ಅಗತ್ಯವಿಲ್ಲದೇ ಏನನ್ನೂ ಮಾಡಲಾರವು
ತಮಗರಿಯದೇ ವೃಕ್ಷಗಳ ಬೆಳೆಸುವವು.
ಒಗ್ಗಟ್ಟು ಏನೆಂದು ಒಂಟಿತನವೇನೆಂದು
ಜಗದ ಸರ್ವ ಜೀವಿಗಳಿಗೆ ಸಾರಿ ಹೇಳಿದವು
ತನದೆಂದು ಬಚ್ಚಿಡದೆ ತಮ್ಮವರೆದುರು ಬಿಚ್ಚಿಡದೇ
ಅಗತ್ಯವಿದ್ದರಷ್ಟೇ ಬೇಟೆಯಾಡುವವು.
ಹಸಿವೆ ಇಲ್ಲದಿರೆ ಬೇಟೆಯೇ ಮೇಲ್ಬಿದ್ದರೂ
ಸರಿದು ನಿಂತು ಸರಸರ ಬೇರೆಡೆ ತೆರಳುವವು
ಹಸಿವಾದೊಡೆ ಪ್ರಾಣವ ಪಣಕ್ಕಿಟ್ಟು ಬೇಟೆ
ಕೈ ತಪ್ಪದಂತೆ ಒಗ್ಗಟ್ಟಾಗಿ ಹೋರಾಡುವವು
ಜಿದ್ದಿಗೆ ನಿಂತರೆ ಸಮಾನರಾರಿವರಿಗೆ
ಸೋತು ಶರಣಾದರೆ ಕ್ಷಮಿಸುವುದು ಬಲ್ಲವು
ಇವರಿಂದಲಾದರೂ ಮಾನವರು ನಾವು
ಕಲಿತರೆ ನೆಮ್ಮದಿಯಿಂದ ಬಾಳುವೆವು
ವೈಲೇಶ ಪಿ ಯೆಸ್ ಕೊಡಗು
೪/೧೦/೨೦೧೮
Comments
Post a Comment