ಮಹಾತ್ಮರಿವರು
ಮಹಾತ್ಮರಿವರು
~~~~~~~~~
ಉಪ್ಪು ಸೊಪ್ಪಿನ ತೆರಿಗೆಯ ಪ್ರತಿಭಟಿಸಿ
ಉದರಂಭರಣೆಗೆ ನ್ಯಾಯವನೊದಗಿಸಿ
ಸತ್ಯಾಗ್ರಹ ಉಪವಾಸವೆಂದು ಅಪಹಾಸ್ಯಕೆ
ಗುರಿಯಾದರೂ ಸತ್ಯ ಮಾರ್ಗದಿ ನಡೆದವರು
ದೇಶದ ಬಡತನದ ಬೇಗೆಯನನುಭವಿಸಿ
ವಿದೇಶಿ ವಸ್ತುಗಳನು ದೂರೀಕರಿಸುತಾ
ಸ್ವದೇಶಿ ಉತ್ಪನ್ನಗಳ ಬೆಳವಣಿಗೆಗೆಂದೇ ಸ್ವತಃ ನೇಯ್ದು
ದೇಶದ ಸರ್ವ ಸ್ವತಂತ್ರಕೆ ತನ್ನೊಡಲನೇ ತೇಯ್ದು
ಧರ್ಮದ ಹೆಸರಿನಲಿ ದೇಶವೇ ಹೊತ್ತಿ
ಉರಿಯದಿರಲೆಂದು ವಿದೇಶಿಯರ ಒಡೆದು
ಆಳುವ ನೀತಿಗೆ ಶರಣಾದವರು ರಾಮ ರಾಜ್ಯದ
ಕನಸುಗಳನು ಮನೆ ಮನದಲಿ ಬಿತ್ತಿ ಅಮರರಾದರು
ನಮ್ಮ ಜನನಕೂ ಮುನ್ನವೇ ಮರಣ ಆವರಿಸಿದ
ಮಹಾತ್ಮರಿವರು ದೇಶದ ಬಿಡುಗಡೆಗೆ ಬಡಿದಾಡಿದ
ಮಹನೀಯರ ಕಂಡು ಅಹಿಂಸೆಯ ಹಾದಿಯಲಿ
ನಡೆದು ಶಾಂತಿಯುತ ಗೆಲುವಿನ ರೂವಾರಿಯಿವರು
ವೈಲೇಶ ಪಿ ಯೆಸ್ ಕೊಡಗು
೩/೧೦/೨೦೧೮
Comments
Post a Comment