ಮೆರೆಸು ಬಾ ಸಂಸ್ಕೃತಿ
೧. ಮೆರೆಸು ಬಾ ಸಂಸ್ಕೃತಿ
~~~~~~~~~~~~~
ಮುನಿಸೇಕೆ ಗೆಳತಿ ನಿನಗಿದು ತರವೆ
ಮುಂಗಾರು ಮಳೆ ತೆರದಿ ನೀನೇಕೆ ಅಳುವೆ
ಒಮ್ಮೊಮ್ಮೆ ಕಳೆಕಟ್ಟಿ ಒಲವನ್ನೆ ತರುವೆ
ಮಗದೊಮ್ಮೆ ಕಳ್ಳಾಟ ಮೈವೆತ್ತಿ ಬರುವೆ ||ಪ||
ಕಾಮನ ಬಿಲ್ಲಿನ ಬಣ್ಣಗಳ ಮೆರುಗು
ಆಗಸದಿ ಬೆಳಗುವ ಮೋಹವ ನೀಗು
ದಡಮುಟ್ಟೆ ಧರೆಯ ಕಣ್ಕಟ್ಟಿ ಕೊರಗು
ಕಾಣದೆ ಕಾಡಿಸೋ ಕಾಮಿನಿಯೆ ಆಗು ||೧||
ಮಳೆಯಂತೆ ಬುವಿಗೆ ನಿನ್ನಿಂದ ಸಿಹಿಮುತ್ತು
ತನುಮನದಿ ಇಳಿಯುತಿದೆ ಮೋಹದ ಸಂಪತ್ತು
ಚಿಗುರೊಡೆದ ಬಯಕೆಗೆ ಸಿಹಿಮುತ್ತಿನ ಸೊತ್ತು
ತರುಲತೆಗಳು ಅರಳಿ ನೀಡಿವೆ ಮಧು ತುತ್ತು ||೨||
ಸುಮರಾಶಿ ಸುರಿದು ನಿನ್ನ ಪೂಜಿಸುವೆ
ಸುರಲೋಕದ ಸುಮವ ನಿನಗೆಂದೆ ತರುವೆ
ಸಮ ಸಮಕೆ ನಡೆಯುತಲಿ ನಾ ಜೊತೆಗೆ ಬರುವೆ
ಸಮಯದಲಿ ಸುಮದಂತೆ ನಿನ್ನ ನಾ ಪೊರೆವೆ || ೩||
ಹರಿಯಲಿ ನಮ್ಮೊಲವು ನದಿಯಂತೆ ಗೆಳತಿ
ಕಲ್ಲು ಮಳ್ಳುಗಳೆಲ್ಲ ಮುಳುಗಿಸುವ ಸುಮತಿ
ಬೆರೆಸಿ ಮರೆವ ಬಾಳಿನಲಿ ಸಾರ್ಥಕದ ಕೀರುತಿ
ಮೆರೆಸಿ ಬಾಳುವ ಒಡತಿ ಭಾರತದ ಸಂಸ್ಕೃತಿ ||೪||
*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೯/೯/೨೦೧೭
Comments
Post a Comment