ಗಝಲ್: ೪೫

ಗಝಲ್ : ೪೫
~~~~~~~~
ನಗುವ ಕಂದಮ್ಮಗಳ ನಲುಗಿಸುತ್ತಿರುವೆ ನಿನಗಿದು ತರವೇ ವಿಧಿಯೆ
ನಗುತ ನಗಿಸುವ ದೇವ ನೀನಾಗದೇ ಅಳಿಸುವುದು ತರವೇ ವಿಧಿಯೆ

ಅಳಲು ಆಗದೆ ಅಳಲು ಹೆತ್ತವರು ಅಳುತಲಿದ್ದರೂ ಅರಿಯದಾಗಿರುವೆ
ಆಡುವ ಕಂದ ಅರಳುವ ಮುನ್ನವೇ ಸೆಳೆದೊಯ್ಯುದು ತರವೇ ವಿಧಿಯೆ

ನಗುವವರ ಕಣ್ಮುಂದೆ ನಗುವ ಕಂದನ ಕದ್ದೊಯ್ದು ನರಕಕೆ ತಳ್ಳಿದೆಯಾ
ನಗಲೆತ್ನಿಸುವ ಮನದ ಭಾವನೆಗೆ ಬೆಂಕಿಯನಿಡುವುದು ತರವೇ ವಿಧಿಯೆ

ಆಲದ ಬೀಳಲಲ್ಲವಿದು ಒಂಟಿ ಮರದಿ ಮೂಡಿದ ಚಿಗುರ ಚಿವುಟಿದೆಯಾ
ಅರುಳು ಮರುಳಿಗೆ ಸಿಲುಕಿ ಸಾಕೆಂದವರನಿಲ್ಲೇ ಬಿಡುವುದು ತರವೇ ವಿಧಿಯೆ

ಹೊತ್ತು ಹೆತ್ತವರ ಸಂಕಟವ ಅವಲೋಕಿಸದೇ ಬರೇ ದುಡಿಮೆ ಎಂದಿರುವೆ
ಹೆತ್ತ ಕರುಳಿನ ಕೂಗನರಿಯದೇ ಕತ್ತುಕೊಯ್ದು ಒಯ್ಯುದು ತರವೇ ವಿಧಿಯೆ

ಸಿಡಿಲನ ಅನುಜನ ಕುಡಿಯ ಕಡಿಯಬಾರದಿತ್ತು ಶಿವರಾಯನ ನುಡಿಗೆ ನಡೆವನೆ
ಜನಕರೆದುರು ನವಯುವಕ ತನಯನ ತರಿದು ಕರೆದೊಯ್ಯುದು ತರವೇ ವಿಧಿಯೆ

ವೈಲೇಶ ಪಿ ಯೆಸ್ ಕೊಡಗು
೧೨/೧೦/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ