ಕಂದಾ- ಅನುಬಂಧ
ಕಂದಾ-ಅನುಬಂಧ
~~~~~~~~~~
ಅಮ್ಮನೊಲವನು ಧಿಕ್ಕರಿಸಿದೆಯಾ ಕಂದಾ
ಬಿಡಿಸಿಕೊಂಡೆಯಾ ಬಂಧುಗಳ ಅನುಬಂಧ
ಬಾಳ ಹಣತೆಗೆ ಬತ್ತಿ ಎಣ್ಣೆ ನೀನಾಗಬೇಕಿತ್ತು.
ಅಮ್ಮನಾಸೆಗೆ ಜೀವವನು ನೀ ತುಂಬಬೇಕಿತ್ತು
ಅದೆಷ್ಟೋ ಆಸೆಗಳ ಹೊಸಕಿಬಿಟ್ಟೆಯಲ್ಲ
ಯಾರ ಕುರಿತು ಚಿಂತಿಸದೇ ಸೋತೆಯಲ್ಲ
ಅವರಿವರು ಅಲ್ಲಿರಲಿ ಬಿಡು ಅಂತಃಕರಣ
ತುಂಬಿದಮ್ಮ ಅತ್ತು ಅರೆಜೀವವಾಗಿದೆಯಲ್ಲ
ಅಮ್ಮನೇ ಮಿಗಿಲೆಂದು ನೀನರಿಯದಾದೆಯಾ
ಅಮ್ಮನ ಋಣವ ಅನುಗಾಲ ಮರೆತೆಯಾ
ಸಾಕಿ ಸಲಹಿದ ಮಾತೆ ಮಾತುಗಳ ಕೇಳದೇ
ಮೂರು ದಿನದ ಪ್ರೀತಿಗೆ ಬೆಲೆ ಕೊಟ್ಟೆಯಾ
ಜೀವ ಉಳಿಸಲು ಹರ ಸಾಹಸ ಗೈವರಿಲ್ಲಿ
ಜೀವ ಉಳಿಯಲೆಂದು ಕೋಟಿ ಕಳೆವರಿಲ್ಲಿ
ಅಮೂಲ್ಯ ಮಾನವ ಜನ್ಮವ ಕಳೆದು ಬಿಟ್ಟೆ
ಅಳಿದುಳಿದ ಎಲ್ಲರಿಗೂ ನೋವು ಕೊಟ್ಟೆ
ನಿಜದ ಪ್ರೀತಿಯು ಸಾವಿಗೂ ಬಾರದವಳಾ
ಪ್ರೀತಿಯ ಹೆಸರಲಿ ಮೋಸ ಮಾಡದಳಾ
ನೀ ಪ್ರೀತಿಸಿದೆ ಪ್ರೀತಿಯೇನೆಂದರಿಯದವಳಾ
ಸಿಗುತ್ತಿತ್ತು ನಿನಗೆ ಅವಳಿಗೂ ಮಿಗಿಲ ಹವಳ
ವೈಲೇಶ ಪಿ ಯೆಸ್ ಕೊಡಗು
೨೨/೯/೨೦೧೮
Comments
Post a Comment