ಪ್ರೇಮದೊರತೆ
ಪ್ರೇಮದೊರತೆ
~•~•~•~•~•
ಪ್ರೇಮದೊರತೆ ಅರಿತು ಜಗವನೇ ಮರೆತು
ಕಲೆತು ಬೆರತು ಎನಿತು ಸುಖದಿ ಹೊಸತು
ಬೆಸೆದು ಹಸಿವು ಕಳೆದು ಬೆಳೆದ ಬಾಳಿದು
ಹೋಗದು ಅಳಿದು ನಿನಗೇಕೆ ತಿಳಿಯದಿದು
ನಾವೆಂದೂ ಒಂದೆಂದು ನೀನಂದು ನುಡಿದು
ಏನಿಂದು ಹೊಸತೊಂದು ತಗಾದೆಯೆಂಬೆ
ಜಗದಂಬೆಯ ಕೈಗೊಂಬೆ ಈ ನರ ಬೊಂಬೆ
ಎನುತಾ ನೀನಂದು ಎನ್ನ ಸೇರಿಸಿದೆ ಬಾಂಬೆ
ಮಂಪರು ಕಳೆಯೆ ಸುತ್ತಲೂ ನರ ಮೃಗಗಳೆ
ಮನದಲೂ ನಯನದಲೂ ದುಃಖದ ಮಳೆ
ನಡೆಯದಾಗಿದೆ ಇಲ್ಲಿ ನನ್ನ ಯಾವ ರಗಳೆ
ನಂಬಿ ಮೂಢಳಾದೆನು ನಿನ್ನಯ ಬೊಗಳೆ
ಕಾಲೇಜು ದಿನಗಳಲಿ ನಾನೇ ಊರ್ವಶಿ ರಂಭೆ
ಪ್ರೀತಿಯ ಕೈಗೆ ಸಿಲುಕಿ ಬಾಳೇ ಕವಲೊಡೆದ ರೆಂಬೆ
ಕನಸಾಯಿತೆ ನಾ ಕಂಡ ವ್ಯಾಮೋಹವೆಂಬೆ
ಎನ್ನ ಕೈಗೀಗ ಚಿಕ್ಕ ನಾಯಕನ ಹಳ್ಳಿ ಚೊಂಬೇ
*ವೈ.ಕೊ*
*ವೈಲೇಶ ಪಿ ಯೆಸ್ ಕೊಡಗು*
*೧೮/೧೧/೨೦೧೮*
Comments
Post a Comment