ಖನಿಜಗಳು
ಬೆರೆಸದಿರಿ ಖನಿಜ
~~~~~~~~~
ಸೈರಂದ್ರಿಯ ರಂದ್ರಗಳು ನಗುತಿವೆ ಮನುಜ
ಓಹೋ ಎನ್ನುವ ದುರಾಸೆಗಳೇ ನಿಮ್ಮ ಕಣಜ
ಮಂದಿಗಿರಲೆಂದು ನಿಮ್ಮ ನಮ್ಮೆಲ್ಲರ ಅಗ್ರಜ
ಇಳೆಯನು ಉಳಿಸಿದರು ಬೆರೆಸದೇ ಖನಿಜ
ದುರ್ಮೋಹಕೆ ಬದಲಾಗಿ ಬಲಿಯಾಗಬೇಕಿದೆ
ದುರ್ವರ್ತನೆಗೆ ವಶವಾಗಿ ಶವವಾಗಿ ಸಾಗಲಿದೆ
ಉರಿಸಿದೆ ಬೆರೆಸಿದೆ ವಿಷವಸ್ತುಗಳ ಅರಿಯದೆ?
ಇಲ್ಲ ಅರಿಯದಂತೆ ಅರಿತರಿತು ನಟಿಸುವುದೇ?
ಓಝೋನ್ ಪದರ ನಿಧಾನ ಕರಗುತಲಿದೆ
ಅತಿನೇರಳೆ ಕಿರಣಗಳು ಸ್ಪುರಿಸಿ ಕಾಡಲಿವೆ
ಆರೋಗ್ಯ ಹದಗೆಟ್ಟು ಆಯಸ್ಸು ಕ್ಷಿಣಿಸಲಿದೆ
ನಮ್ಮರಿವಿನ ಕೊರತೆಯಲಿ ಬುವಿ ನಲುಗಿದೆ
ವೃಕ್ಷ ಸಂಕುಲಗಳ ತರಿದು ತಂಪು ಮರೆಯಾಗಿ
ಐಷಾರಾಮಿ ಜೀವನ ಶೈಲಿಯು ಮಿಗಿಲಾಗಿ
ಕೃತಕ ತಂಪಾಗಿಸುವ ಸಾಧನಕೆ ಮೊರೆಹೋಗಿ
ಸ್ವಯಂಕೃತ ಅಪರಾದಕೆ ಮಾನವ ಬಲಿಯಾಗಿ
ಅತಿವೃಷ್ಟಿ ಅನಾವೃಷ್ಟಿ ಅನಾವರಣ ಮಿಗೆ
ಸಾಗುತಿರಲು ಅನುದಿನವು ಎಂದಿಗೂ ಹೀಗೆ
ಧರೆಯ ಜೀವಸಂಕುಲಕೆ ತಾಳಲಾರದ ಬೇಗೆ
ದೌರ್ಜನ್ಯ ತಡೆಯದಿರೆ ಹಾಕಿಕೊಳ್ವೆವು ಹೊಗೆ
ವೈಲೇಶ ಪಿ ಯೆಸ್ ಕೊಡಗು
೧೬/೯/೨೦೧೮
Comments
Post a Comment