ಗಝಲ್ : ೪೩
ಗಝಲ್ : ೪೩
~~~~~~~~
ಮನಸ್ಸುಗಳ ಮೌನಕೆ ಅರ್ಥವೇನಿಹುದು ಅರಿಯದೇಕೆ ಸಖ
ಯಶಸ್ಸುಗಳ ಆಹ್ವಾನಕೆ ಹಿತವೇನಿಹುದು ತಿಳಿಯದೇಕೆ ಸಖ
ನೀ ತರುವ ಕಾಣಿಕೆ ಅದೇತಕೋ ಕಾಣೆ ಎನ್ನ ಕಣ್ಮುಚ್ಚಿಹುದು
ಉಡುಗೊರೆ ಹಿತವಾದಾಗ ಕಣ್ಣಿದು ಮಸುಕಾಗುವುದೇಕೆ ಸಖ
ಹೃದಯದ ಹಸಿವು ನೀಗೆ ಕಣ್ಣೆದುರು ನನ್ನೊಡನೆ ನೀನಿರಬೇಕು
ಉದರದ ಹಸಿವಿಗೆ ಮಧುಪಾತ್ರೆಯನು ಹರವಿಡಬೇಕೇಕೆ ಸಖ
ನಿಮ್ಮ ಬರುವೆಮಗೆ ಉದರ ಪೋಷಣೆಯ ಹಾದಿಯಾಗಿಹುದು
ಸುರಪಾನದ ಸೊಬಗಿನಲಿ ನೀವು ಮೈಮರೆಯುವುದದೇಕೆ ಸಖ
ಬಹು ದೊಡ್ಡ ಕನಸುಗಳ ಕಂಡಿದ್ದೆ ನಾನಂದು ನನಸಾಗಲು ಸಾಧ್ಯ
ನಮ್ಮ ಕನವರಿಕೆಗಳನು ಮನದಟ್ಟು ಮಾಡೆ ಅಸಾಧ್ಯವೇಕೆ ಸಖ
ಸಿಡಿಲನ ಮನದಲ್ಲಡಗಿರುವ ಭಾವನೆಗಳನು ನಾನರಿಯಲಾರೆನೆ
ಜೀವನದ ಭಾವಗಳ ನೋವುಗಳ ನೀನರಿಯದಾದೆ ಅದೇಕೆ ಸಖ
ಸಿಡಿಲು
ವೈ.ಕೊ.
೧೦/೮/೨೦೧೮
Comments
Post a Comment