ಕೆಡುಕರು
ಕೆಡುಕರು
~~~~~
ಕುಡುಕರೋ ಇವರು ಕುಡುಕರೋ
ಎಲ್ಲೆಂದರಲ್ಲಿ ಕುಡಿವ ಕೆಡುಕರೋ
ಅಡ್ಡಿಪಡಿಸಿದವರ ಹಿಡಿದು ಬಡಿವರೋ
ಕಡಿದು ಹಾಕಲೇನಿಲ್ಲದೇ ಕುಡಿಯುವವರೋ
ದುಡಿದು ಗುಡ್ಡೆ ಹಾಕಿದಪ್ಪಮ್ಮರ ಮಾನ
ಹರಾಜು ಗೈವರಿವರಿಗೆ ವೃಥಾ ಸುಮ್ಮಾನ
ಯಾರೇನಂದರೂ ಇವಗಿರಿಲ್ಲ ಅವಮಾನ
ಹುಚ್ಚಾಟವೇ ಇವರ ಸ್ವಾಭಾವಿಕ ಅವಗುಣ
ಮನೆ ಹೆಂಗಸರು ಏನು ಮಾಡುವರೋ
ಅವರ ಸಾಕಲು ಮತ್ಯಾರು ಇರುವರೋ
ಕತ್ತಲೆ ರಾತ್ರಿಯಲಿ ಮನೆಗೇಕೆ ಹೋಗರೋ
ಇವರೇನು ಬೀದಿ ಸುತ್ತುವ ಶ್ವಾನವಾದರೋ
ಇವರ ನಡವಳಿಕೆಗೆ ತಾವೂ ಪೋಷಕರೇ
ನೀವು ಕೂಡ ಇವರಿಂದ ಶೋಷಿತರೇ
ಮಕ್ಕಳಿಲ್ಲದೆ ಹೊತ್ತಿ ಉರಿದರೂ ಧರೆ
ಬೇಕಿಲ್ಲ ಸುತರಿವರು ಬುವಿಗೆ ಹೊರೆ
ವೈ.ಕೊ.
೯/೮/೨೦೧೮
Comments
Post a Comment