ಇರಲಿ ಅಕ್ಕರೆ
ಇರಲಿ ಅಕ್ಕರೆ
~~~~~~~
ದೂರವಿದ್ದರೂ ಹತ್ತಿರವಿರುವ
ಕಾಣದಿದ್ದರೂ ಕಣ್ಣೊಳಗಿರುವ
ಮಾತಿಗೆ ನಿಲುಕದ ಮೋಹಕೆ
ಸಿಲುಕದ ಸಂಬಂಧವೇ ಸ್ನೇಹ
ಸ್ನೇಹ ಬಂಧುಗಳಿಗೂ ಮಿಗಿಲು
ಸುಖದುಃಖಗಳಿಗೂ ಹೆಗಲು
ಹೆತ್ತವರ ಮೀರಿ ಪ್ರೀತಿಯ ತೋರಿ
ನಿಜದ ಗೆಳೆಯರು ನೀವಾದಿರಿ
ಮನದೊಳಿದ್ದರೂ ಸಾಕು
ನಿತ್ಯವೂ ಕಾಣಲೇಕೆ ಬೇಕು
ಮುಷ್ಟಿಯಷ್ಟು ಅಕ್ಕರೆ ಇರಬೇಕು
ಕೊಂಕು ಬಿಂಕ ತುಂಬಿರಬೇಕು
ಅವಸರಕೆ ಅಗತ್ಯ ಹಾಜರಿರಲಿ
ಬಾಳಿನೇಳಿಗೆಗೆ ಹಣತೆಯಾಗಲಿ
ನೋವು ನಂಜುಗಳ ನುಂಗುತಲಿ
ಉಸಿರಿರುವವರೆಗೂ ಜೊತೆಗಿರಲಿ
ವೈ. ಕೊ.
೭/೨/೨೦೧೮
Comments
Post a Comment