ಮೌನ ಗೀತೆ
ಈ ದಿನದ ಮೊದಲನೇ ಗೀತೆ
====================
೧ ಮೌನ ಗೀತೆ
~~~~~~~~
ಬರಿಯ ಮಾತಿಗಿಂತಲೂ
ಗೀತೆ ಇಂದು ಮುಂದಿದೆ
ಮನದ ಮಾತು ತಿಳಿಸಲು
ಮೌನ ಗೀತೆ ಸಾಕಿದೆ ||ಪ||
ಪ್ರೇಮಿ ಪಾಡು ಒಲವ ಹಾಡು
ಯುಗಳ ಗೀತೆ ಆಗಿದೆ
ಮನಸ್ಸು ಮುರಿದು ಪ್ರೇಮ ಸರಿದು
ವಿರಹ ಗೀತೆ ಮೂಡಿದೆ ||೧||
ಹೃದಯ ನೋವ ಹಂಚಿಕೊಳಲು
ಭಾವಗೀತೆ ಹಾಡಿದೆ
ದೇವನಲ್ಲಿ ಅಳಲು ಇಡಲು
ಭಕ್ತಿಗೀತೆ ಕೇಳಿದೆ ||೨||
ಯಾವ ಜನ್ಮ ಪುಣ್ಯ ಫಲವೊ
ನಮ್ಮ ನಾಡಲಿ ಜನಿಸಿದೆ
ಎಲ್ಲ ಮರೆತು ಕನ್ನಡಾಂಬೆ
ಸೇವೆ ಗೈಯ್ವ ಮನವಿದೆ ||೩||
(ಎಲ್ಲವನ್ನೂ ಎರಡೆರಡು ಬಾರಿ ಹಾಡಿದರೆ ಉತ್ತಮ ಎಂದು ಈ ಕಿರಿಯನ ಭಾವನೆ)
*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೧/೯/೨೦೧೭
ಈ ದಿನದ ಎರಡನೆಯ ಗೀತೆ
______________________
ಪರಿಸರವ ಉಳಿಸಿರಿ
~~~~~~~~~~~
ಬನ್ನಿ ಬನ್ನಿ ಗೆಳೆಯರೆ
ಬನ್ನಿ ಬನ್ನಿ ಎಳೆಯರೆ
ಬನ್ನಿ ಬನ್ನಿ ಹಿರಿಯರೆ
ಭಾರತದ ಪ್ರಜೆಗಳೆ ||ಪ||
ಮಗುವೆ ನೀನು ಸಿಹಿಯ ತಿಂದು
ಸಿಪ್ಪೆಯನ್ನು ಎಸೆದರೆ ಕರಗದಲ್ಲ
ಸಿಪ್ಪೆಯದು ಇನ್ನೂರು ವರ್ಷವಾದರು
ಎಸೆಯದಿರು ಎಸೆಯದಿರು ಕಸವನು ||೧||
ಹೊಲ ಗದ್ದೆ ಕಸವೇ ತುಂಬಿ
ಬೆಳೆಯ ಬೆಳೆಯಲಾಗದು!
ಬೆಳೆಯ ಬೆಳೆಯದಿದ್ದ ಮೇಲೆ
ತಿನ್ನಲೇನು ಸಿಗುವುದು? ||೨||
ಗುಟುಕ ತಿಂದು ಅಲ್ಲೇ ಉಗಿದು
ಪರಿಸರವ ಕೆಡಿಸಿದೆ
ಸಾಲದೆಂದು ಪೊಟ್ಟಣವ
ನಿಂತಲ್ಲೆ ಬಿಸುಟಿದೆ. ||೩||
ಬಿಸುಟ ಕಸವು ಜಲಕಣ್ಣು ಸೇರಿ
ಗುಟುಕು ಜಲವು ದೊರಕದೆ
ಸಕಲ ಜೀವ ಸಂಕುಲಕೆ ಪ್ರಾಣ
ಸಂಕಟ ಎನಿಸಿದೆ. ||೪||
ಅಲ್ಲಿ ಇಲ್ಲಿ ಎಸೆದ ತ್ಯಾಜ್ಯ
ರೋಗಕಾರಕವಾಗಿದೆ
ನಮ್ಮ ಬದುಕು ನಮ್ಮ ಜೀವ
ನಾವೇ ಕಾಯಬೇಕಿದೆ ||೫||
ಎಲ್ಲೇ ಹೊರಡಿ ಹೇಗೇ ಹೊರಡಿ
ಬಟ್ಟೆ ಬ್ಯಾಗು ಹಿಡಿಯಿರಿ
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ
ಪರಿಸರವ ಉಳಿಸಿರಿ ||೬||
*ವೈಲೇಶ ಪಿ ಯೆಸ್ ಕೊಡಗು*
*ಚಾಲ
Comments
Post a Comment