ಅಂದು-ಇಂದು:- ಭಾಗ ೨

ಅಶ್ಲೇಷ ಮಳೆ ಬಂದು ಬೆಟ್ಟಕ್ಕೆ ಸೊಸಲು ಹತ್ತಿ ಎಂಬುದು ಜಾನಪದರ ಗಾದೆಗಳಲ್ಲಿ ಒಂದು
ಇದರ ಭಾವಾರ್ಥ :- ಅಶ್ಲೇಷ ಎಂಬ ನಾಮದ ಮಳೆ ಬಂದರೆ ಬೆಟ್ಟದವರೆಗೆ ಸೊಸಲು ಎಂದರೆ ಮೀನು ಎಂದರ್ಥ. ಬೆಟ್ಟಕ್ಕೆ ಮೀನು ನೀರಿಲ್ಲದೇ ಹತ್ತಲಾರದು.
ಬೆಟ್ಟದವರೆಗೂ ನೀರು ಬರುವುದು ಎಂದರ್ಥ ಅಲ್ವೇ.

ಕೊಡಗಿನ ಇತಿಹಾಸದಲ್ಲಿ ಬಾರದ ಮಳೆಯೇನಲ್ಲ ಎಂಬ ಭಾವನೆಗಳು ಅನೇಕರಲ್ಲಿ ಇದೆ. ನನ್ನ ಅಭಿಪ್ರಾಯ ಕೂಡ ಇದೆ ಆಗಿದೆ. ನಮ್ಮ ಬಾಲ್ಯದಲ್ಲಿ ನಾವು ಇದ್ದಲ್ಲಿಗೆ ಎಂದರೆ ನಮ್ಮ ಗದ್ದೆಗಳಿಗೆ ಮಳೆಗಾಲದಲ್ಲಿ ಮೀನು ಬರುತ್ತಿದ್ದವು. ಕಾಡು, ಏಡಿ, ಮೀನು, ಗುಳ್ಳೆನರಿ, ಮೊಲ, ಹಾವು, ಕಾಡುಬೆಕ್ಕು. ಕಾಡುನಾಯಿ, ಕಟ್ಟು ಹಾವು, ಕಾಡುಹಂದಿ, ಕಾಡುಕುರಿ ಇನ್ನಿತರ ಅನೇಕ ಕಶೇರುಕ ಅಕಶೇರುಕ ಜೀವಿಗಳನ್ನು ಕಣ್ಣಾರೆ ಕಂಡು ಆನಂದಿಸಿದ ದಿನಗಳು ಅವು. ಸಂಜೆ ಆರಾಯಿತೆಂದರೆ ಕೈಯಲ್ಲಿ ಆರು ಬ್ಯಾಟರಿಯ ಟಾರ್ಚ್ ಹಾಗೂ ಅತ್ಯಂತ ಹರಿತವುಳ್ಳ ಕತ್ತಿಯಿಲ್ಲದೇ ಯಾರೂ ಕೂಡ ರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗಲಾರದಷ್ಟು ಕಾಡುಪ್ರಾಣಿಗಳಿದ್ದ ಕಾಲವದು. 

ಮನೆಯ ಕೊಟ್ಟಿಗೆಯಲ್ಲಿ ರಾಸುಗಳು, ಮನೆತುಂಬಾ ಮಕ್ಕಳು ಮರಿ ಅಜ್ಜ ಅಜ್ಜಿಯರು ಅತ್ತೆ ಮಾವಂದೀರು ಎಲ್ಲರ ಕೂಡು ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ಪೂರಕವಾಗಿ ಪ್ರೇರಕವಾಗಿ ಕೈ ಜೋಡಿಸುತ್ತಿದ್ದ ಕಾಲವದು. ಸಗಣಿ ಗೊಬ್ಬರ ತರಗೆಲೆ ಕಾಡುಗೊಬ್ಬರ ಹಸಿಗೊಬ್ಬರ ಕೆರೆಗೋಡು ಬಳಸಿ ಬೆಳೆ ಬೆಳೆಯುತ್ತಿದ್ದ ಕಾಲ ಕೂಡ ಹೌದು. ಕಾಲು ಕಾಲಿಗೆ ಏಡಿ ಮಿನು ಮುತ್ತುತಿದ್ದ ಕೈ ಎತ್ತಿದರೆ ಕಾಗೆ ಅಥವಾ ಇನ್ನಾವುದೋ ಪಕ್ಷಿಗಳಿಗೆ ಕೈ ತಾಗುತ್ತಿತ್ತು. ರಣಹದ್ದುಗಳು ಕಾಡಿನಂಚಿನಲ್ಲಿ ಸತ್ತ ದನಕರುಗಳನ್ನು ತಿನ್ನಲು ಕಾದಿರುತಿದ್ದವು. ರೆಕ್ಕೆ ಬಿಚ್ಚಿ ಕುಳಿತಿರುತಿದ್ದ  ಅವುಗಳನ್ನು ಕಂಡರೆ  ಮಕ್ಕಳಾದ ನಮಗೆ ಜಂಘಾಬಲವೇ ಉಡುಗಿದಂತಾಗುತಿತ್ತು.

ಆಹಾರ ಕ್ರಾಂತಿಯ ಹರಿಕಾರವಾಗಿ ಸೀಮೆ ಗೊಬ್ಬರ ಅರ್ಥಾತ್ ಪರ್ಟಿಲೈಸರ್ ಬಂದ ನಂತರ ಏಡಿ ಮೀನು ಕಾಗೆ ನರಿ ಮುಂತಾದ ಒಂದೊಂದೇ ಜೀವಸಂಕುಲಗಳು ಕಾಣೆಯಾಗತೊಡಗಿದವು. ರಾಗಿ ಜೋಳ ಗೋಧಿ ಮೆಕ್ಕೆಜೋಳದ ಜೊತೆಗೆ ವಾಣಿಜ್ಯ ಬೆಳೆಗಳು ಭತ್ತ ಬೆಳೆದವು. ಆದರೆ ಹಣ ಅವಕ ಹೆಚ್ಚಿದಂತೆ ಎದೆಯೊಳಗಿನ ಭಾವನೆಗಳು ನಿಧಾನವಾಗಿ ಬತ್ತತೊಡಗಿದವು. ಕೂಡು ಕುಟುಂಬವು ಮುಂದೆ ಏಕ ಸಂತಾನದ ಸಾರವಿಲ್ಲದ ಸಂಸಾರವಾಯಿತು. ಹಿರಿಯರಿಲ್ಲದ ಕುಟುಂಬ ಮೇಟಿಯಿಲ್ಲದ ಕಣವಾಗಿ ತುಡುಗು ತುರಗದಂತೆ ಬದುಕಾಯಿತು.

ಇಂದು ಟ್ರ್ಯಾಕ್ಟರ್ ಟಿಲ್ಲರ್ ಗಳು ಬಂದವು. ಊಳುವ ದನಗಳನ್ನು ಉಳಿಗಾಲವಿಲ್ಲದಂತೆ ಮಾಡಿದೆವು. ಹಾಲು ಕೊಡುವ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾರ್ಮೋನ್ ಇಂಜೆಕ್ಷನ್ ಕೊಟ್ಟು ಹಾಲು ಕರೆಯವ ಹಣದ ಎ ಟಿ ಎಂ ಮಾಡಿಕೊಂಡೆವು. ಕಾಲಕ್ರಮೇಣ ಗದ್ದೆಗಳು ಪಾಳುಬಿದ್ದವು. ಕಾಡು ಕಡಿದು ತೋಟ ಮಾಡಿ ಗದ್ದೆ ಬಯಲುಗಳನ್ನು ಮನೆದಳಗಳನ್ನಾಗಿ

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ