ಭಾರತ ಮಾತೆ ದೇವತೆ
ಭಾರತ ಮಾತೆ ದೇವತೆ
~~~~~~~~~~~~
ಹಾರುತ ಹಾರುತಾ ಏರುತಾ ಸೇರುತ
ಮುಗಿಲೆತ್ತರಕೆ ಬಾನಿಗೆ ಬೆರೆಯುತ
ದೇಶದ ಹಿರಿಮೆಯ ಲೋಕಕೆ ಸಾರುತ
ನವವಿಧ ಗರಿಗಳ ಗಗನಕೆ ಚಾಚುತಾ ||ಪ||
ಹಾರಲಿ ಹಕ್ಕಿಯು ಶಾಂತಿಯ ಸಾರಿ
ಏರಲಿ ರೆಕ್ಕೆಯ ಬಲವನು ತೋರಿ
ಹಾರುತ ಭಾನುವ ಬೆಳಕನು ಮೀರಿ
ಹಾಡಲಿ ಮಾತೆಯ ಜಯಭೇರಿ||೧||
ದೇಶದಿ ಏನೇ ನಡೆಯುತಲಿರಲಿ
ಬಾಹ್ಯಕೆ ಗಮನಕೆ ಬಾರದೆ ಇರಲಿ
ತನ್ನಿ ಬಲವನು ತೋರುವ ದೇಶ
ಬೇಗನೆ ಸವಿಯಿತು ಕುಲನಾಶ ||೨||
ರೈತರ ಯೋಧರ ಕ್ಷೇಮವ ನೋಡಿ
ರಾಷ್ಟ್ರ ಬಲದ ಸಮೀಕ್ಷೆಯ ಮಾಡಿ
ಯುದ್ದವು ಬೇಡವೆ ಬೇಡೆಂದು ಹಾಡಿ
ವಿಶ್ವದಿ ನಡೆಯುವ ಜೊತೆಗೂಡಿ|| ೩||
ಪ್ರಪಂಚವೆ ದೇವರ ಆಲಯದಂತೆ
ಭಾರತ ಮಾತೆಯು ದೇವತೆಯಂತೆ
ವಿಶ್ವವೆ ನಮ್ಮಯ ಹಿಂದಿರುವಂತೆ
ಬಾಳಬೇಕಿದೆ ಮರೆಯುತ ಚಿಂತೆ ||೪||
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೫/೮/೨೦೧೭
Comments
Post a Comment