ಬಾರೋ ಕೃಷ್ಣಯ್ಯ
ಬಾರೋ ಕೃಷ್ಣಯ್ಯ
=============
ಬಾರೋ ಕೃಷ್ಣ ಬಾರಯ್ಯ|
ಬಂದೊಮ್ಮೆ ಮೊಗವ ತೋರಯ್ಯ|
ಬಾಲನೆ ಬಾರೋ ಕೃಷ್ಣಯ್ಯ|
ಲೀಲೆಯ ತೋರೋ ಎನ್ನಯ್ಯ||ಪ||
ದೇವಕಿ ಕಂದ ಯಶೋದೆಗೆ ಚೆಂದ
ನಿನ್ನಯ ಅಂದವು ಮನಕ್ಕಾನಂದ
ಕೃಷ್ಣ ದೇವನೆ ಜಗದ ಮಕರಂದ
ಅರಿತೆನು ಒಲವನು ನಿನ್ನಿಂದ||೧||
ಹದಿನಾರು ಸಾವಿರ ಸಖಿಯರು ನಿನಗೆ
ನೀನೇ ಪ್ರೇರಣೆ ಇಂದಿನ ಮನುಜಗೆ
ದಶ ಅವತಾರದಿ ಕುರುಕ್ಷೇತ್ರ ಪಾಲ
ಧರ್ಮದ ರಕ್ಷೆಗೆ ನೀನೇ ಗೋಪಾಲ||೨||
ಗೊಲ್ಲರ ಗೊಲ್ಲ ಇವನೆಲ್ಲವ ಬಲ್ಲ
ಈತನ ಎದುರು ಆವಾಂತರ ಸಲ್ಲ
ಹೂಡಿಸಿ ಪಾರ್ಥನ ಅಮೋಘ ಬಿಲ್ಲ
ನೀಗಿಸಿ ಲೋಕದ ಅಧರ್ಮವನೆಲ್ಲ|||೩||
ಭಾವಕು ಮಿಗಿಲು ಧರ್ಮವೇ ಎಂದ
ದರ್ಮವ ಮೀರೆ ಮಾವನ ಕೊಂದ
ಗೀತೆಯ ಭೋದಿಸಿ ಬಾಳಿರಿ ಎಂದ
ನಮ್ಮುಸಿರೊಂದೇ ಹೇ ಗೋವಿಂದ||೪||
ಪಾಮರ ಜನ್ಮವ ನೀಗಿಸೋ ದೇವ
ಪಾವನ ಗೈಯುವ ಹೊಣೆ ನಿನ್ನದಯ್ಯ
ಮನುಜನ ಮರೆವನು ಕ್ಷಮಿಸಿ ಬಿಡಯ್ಯ
ಲೋಕವ ರಕ್ಷಿಸೋ ಕೃಷ್ಣಾಜಿ ಮಯ್ಯ||೫||
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೪/೮/೨೦೧೭
Comments
Post a Comment