ಸುಜನರು

ಸುಜನರು
~~~~~
ಸುಜನಗೆ ಅಯಸ್ಸು ನೀಡಬೇಕೆಂದು
ದೇವರಿಗೆ ಮನವಿ ಮಾಡಬೇಕಿಂದು
ಎ.ಪಿ.ಜೆ. ಕಲಾಂ ಪರ ಅಲ್ಲಾರಿಗೂ
ಎ.ಬಿ. ವಾಜಪೇಯಿ ಪರ ಬ್ರಹ್ಮರಿಗೂ

ಜಾತಿ ಮತಕೂ ಮಿಗಿಲಿವರ ಬದುಕು
ತನ್ನವರಿಗೆಂದು ಬೇಡಲಿಲ್ಲ ಎದಕೂ
ಸತಿಸುತರಿದ್ದೊಡೆ ಸಕಲವೂ ಬೇಕು
ಅದಕೆಂದರಿವರು ದೇಶವಷ್ಟೇ ಸಾಕು

ಐದು ಶತಕದವರೆಗೆ ಮಾನವರಿಚ್ಚೆ
ಪಾತಕಿಗಳು ಇಷ್ಟು ಬದುಕಿದರೆ ಹೆಚ್ಚೆ
ಕರ್ಮದನುಸಾರ ಶತಕಗಳು ಸಾಗಲಿ
ಮಾನವೀಯ ಧರ್ಮಕೆ ಬೆಲೆ ಸಿಗಲಿ

ಇವರ ಜನನ ವೀರರು ನಿಜ ದೇವರು
ದೇಶಸೇವೆಗೆಂದೇ ಇವರ ಇಳಿಸಿದರು
ನೇಮ ನಾಮ ಮಾತ್ರ ಬಿಟ್ಟು ನಡೆದರು
ಸ್ವರ್ಗ ಇವರಿಗೆ ಬಹುಜನ್ಮದ ತವರು

ದೇವ ನೀವು ಮನವ ಮಾಡಬೇಕಿತ್ತು
ಮಾರ್ಕಂಡೇಯ ಮುನಿಗೆ ಆಯಸ್ಸಿತ್ತು
ಸಲಹಿದ ತೆರದಿ ಎಂದಿಗೂ ಇವರಿಗಿತ್ತು
ಹದಿನಾರರ ಹರೆಯ ಸತತವಿರಬೇಕಿತ್ತು

ವೈ.ಕೊ.
ವೈಲೇಶ.ಪಿ.ಯೆಸ್. ಕೊಡಗು
೧೮/೮/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ