ಅಳಿಸದಿರಿ ಉಸಿರು

ಅಳಿಸದಿರಿ ಉಸಿರು
~~~~~~~~~~~
ಕಾಣಿರಲ್ಲಿ ದೇವನಗರಿಯ ದೇಗುಲಗಳು
ಇಗರ್ಜಿಗಳು ಮುಳುಗಿವೆ ಮಸೀದಿಗಳು
ಜಾತೀಯತೆ ಅಸಮಾನತೆ ಅಸ್ಪೃಶ್ಯತೆಗಳು
ಸ್ವಜನ ಪಕ್ಷಪಾತ ವೈರತ್ವ ತುಂಬಿದ ಮನಗಳು

ದಿನಕೈದು ನಮಾಜು ಪ್ರಾತಃಕಾಲದ ಪೂಜೆ
ದಿನದಿನದ ಪ್ರಾರ್ಥನೆಯ ಘಂಟಾಘೋಷ
ದಿವೀನಾದ ಅಲಂಕಾರ ಮದದ ಅಹಂಕಾರ
ಸಕಲವೂ ಸ್ವಾರ್ಥ ಜೀವ ರಕ್ಷಣೆಗಿರದ ವ್ಯರ್ಥ

ಆ ಸಂಘ ಈ ಸಂಘಟನೆಗೆ ತುಂಬಿರಲಿ ಮಾನವೀಯತೆ ನಮ್ಮವರೆಂಬರಿವಿರಲಿ
ಅವರ ಕೊಂದು ಇವರೆದೆಯ ಮೇಲ್ನಿಂದು
ಉಳಿದರೇನು ಹೊತ್ತಿಗೆ ತುತ್ತಿಲ್ಲದೆ ನಾವಿಂದು

ಧರ್ಮವೆಂದರದು ಮಾನವ ಧರ್ಮವಾಗಲಿ
ಜಾತಿಮತಗಳ ಅಡ್ಡಗೋಡೆಗಳನು ಕೆಡವಲಿ
ಊರು ಕೇರಿ ನಾಡು ಪಾಡುಗಳು ಅಳಿಯಲಿ
ದೇಶವೊಂದೇ ಪ್ರಾಣವೊಂದೆಂದು ಅರಿಯಲಿ

ಮಸೀದಿ ಮಂದಿರ ಚರ್ಚುಗಳಲಿಹ ದೇವರು
ನಡೆಸರು ನಮ್ಮ ಜೀವದ ಚರ್ಚೆ. ಭೂಸುರರು
ನಾವಾದರೆ ವ್ಯರ್ಥ ಧರ್ಮ ಜಾತಿಯ ಹೆಸರು
ಅಳಿಸದಿರಿ ಮಾನವ ಜನ್ಮದ ಉನ್ನತ ಉಸಿರು

ವೈಲೇಶ ಪಿ ಯೆಸ್ ಕೊಡಗು
೧೪/೮/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ