ತಾಳ್ಮೆ ಇರಲಿ
ಕೆಲವೊಮ್ಮೆ ಕಾಕತಾಳೀಯ ಘಟನೆಗಳು ನಡೆಯುತ್ತವೆ. ತಾಳ್ಮೆ ಅತ್ಯಗತ್ಯ.
ಕೆಲವೊಮ್ಮೆ ಕೆಲವರ ನಡೆ ನುಡಿಗಳು ಕೆಲವರಿಗೆ ಬೇಸರ ತರಿಸುತ್ತವೆ. ತತ್‌ಕ್ಷಣದ ಹೇಳಿಕೆಗಳು. ಪೋಸ್ಟ್'ಗಳು ಗೋಂದು ಆಗದೆ ಗೊಂದಲ ತರುವ ಸಾಧ್ಯತೆ ಹೆಚ್ಚು. ಕೆಲವರಿಗೆ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಅನಿಸಿಕೆಗಳು ಮನಸ್ಸಿಗೆ ಘಾಸಿ ಉಂಟು ಮಾಡುತ್ತದೆ. ಮನಸ್ಸೆಂಬುದು ತೀರಾ ಸೂಕ್ಷ್ಮ. ಒಮ್ಮೆ ಒಡೆದರೆ ಜೋಡಿಸುವುದು ಬಲು ಬಾರ ಕೆಲವೊಮ್ಮೆ ಅಸಾಧ್ಯ. ಕೆಲವು ಸಂದರ್ಭಗಳಲ್ಲಿ ನಾವು ಕೆಲವರ ವಿರುದ್ಧ ಮಾತನಾಡದೇ ಇರುವುದು ಸೂಕ್ತ. ಕಾಲಕ್ರಮೇಣ ತಪ್ಪು ಮಾಡಿದವರು ಯಾರು ಎಂದು ಇಬ್ಬರೂ ತಮ್ಮ ತಮ್ಮ ನಡೆಗಳನ್ನು ಅವಲೋಕಿಸಿದಾಗ ಅರಿವಾಗುತ್ತದೆ. ಈ ರೀತಿಯಲ್ಲಿ ತತ್ಕ್ಷಣವೇ ಪ್ರತಿಯೊಬ್ಬರೂ ಪ್ರತಿಕ್ರಿಯಿಸಿದಾಗ ಮುಂದೊಮ್ಮೆ ನಮ್ಮ ತಪ್ಪು ನಮಗೇ ಅರಿವಾದಾಗ ಹಿಂಜರಿಕೆ ಉಂಟಾಗಬಹುದು. ಅದರಿಂದ ಬಿಗುಮಾನ ಉಂಟಾಗಿ ಕೊನೆಯವರೆಗೂ ದೂರವಾಗಿಯೇ ಇರಬೇಕಾದ ಅನಿವಾರ್ಯ ಎದುರಾಗುತ್ತದೆ. ಈ ರೀತಿಯ ಅನುಭವ ನಮಗೂ ಆಗಿದೆ. ಇದು ಯಾರೊಬ್ಬರ ಕುರಿತ ಮಾತಲ್ಲ.
Comments
Post a Comment