ಸಂರಕ್ಷಕರು

ಸಂರಕ್ಷಕರು
~~~~~~
ಜಗದೆಲ್ಲವನು ರಕ್ಷಿಸುವವರು
ರಕ್ಷಣೆಯ ಕೊರತೆಯುಳ್ಳವರು
ತಮ್ಮದೇ ರಕ್ಷಣೆಗೆ ಭಯ ಬಿದ್ದವರು
ಇವರೇ ನಾಡಿನ ಸಂರಕ್ಷಕರು

ದುರಂತಗಳಿಗೆ ಬಲಿಬಿದ್ದವರು
ದೂಷಣೆಗೆ ಬಲಿಯಾದವರು
ದೋಷಭರಿತರ ಶಿಕ್ಷಿಸುವವರು
ದುಷ್ಟರಿಂದ ಇರಿತಕೊಳಗಾದವರು

ಮೇಲಧಿಕಾರಿಗಳ ಅಪ್ಪಣೆ ಇರದೆಲೆ
ಉಪಯೋಗಿಸ ಬಾರದಿದ್ದರೂ
ಬಲು ಭಾರ ಅಸ್ತ್ರಗಳ ಹೊತ್ತವರು
ಬಿಸಿಲ ಬೇಗೆಗೆ ಬೆಂದು ಹಣ್ಣಾದವರು

ಕಳ್ಳರು ಸುಳ್ಳರು ದ್ರೋಹಿಗಳ
ನಡುವೆ ಇವರ ಏಳುಬೀಳುಗಳು
ನಿಯತ್ತಿನ ಸೇವೆಗೆ ಬೆಲೆಯಿಲ್ಲ ಇವರಿಗೆ
ಅನಗತ್ಯ ಆಹಾರ ಅವರಿವರ ಬಾಯಿಗೆ

ಎಲ್ಲೋ ಕೆಲವರು ಮಾಡಿದ ತಪ್ಪಿಗೆ
ಉಳ್ಳ ನಿಷ್ಠಾವಂತರಿಗೆ ಅಪಮಾನ
ನಂಬದಿರಿ ನಮ್ಮವರೇ ಬಂಧುಗಳೇ
ಪೋಲೀಸರು ನಮಗೆ ಬಂಧು ಭಾಂದವರೆ

ವೈ.ಕೊ.
೨೨/೭/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು