ಗಝಲ್ : ೩೫
ಗಝಲ್ : ೩೫
~~~~~~~~
ಮೂರು ವಿಷಯಗಳು ಮೂರಾಬಟ್ಟೆಯಾಗಿ ನಲುಗುತ್ತಿದೆ ಏನೀ ಬದುಕು
ನೂರಾರು ವಿಷಮಗಳು ಅಡ್ಡಾದಿಡ್ಡಿಯಾಗಿ ನುಲಿಯುತ್ತಿದೆ ಏನೀ ಬದುಕು
ಗುರುಕುಲದಿ ಗುರುವಿಲ್ಲ ಬರಗೆಟ್ಟ ಬವಣೆಗಳೇ ತುಂಬಿ ನಿಂತಂತಿದೆ ನೋಡಾ
ಪಾಠಕೆ ಕೆಲವರದು ಹಲವರು ಬರೇ ಪಗಾರ ದಿನ ನಿರೀಕ್ಷೆಯಿದೆ ಏನೀ ಬದುಕು
ಅಮ್ಮನಿಲ್ಲದ ಮನೆಯಿದು ಏನಿದ್ದರೇನು ಸಂಬಳ ಬಂದರೆ ಸಾಕಾಯಿತೇನು
ಸಿಂಬಳ ತೊಡೆಯಲು ಗಿಂಬಳ ಕೀಳುವ ಮನಸದು ತುಂಬಿದೆ ಏನೀ ಬದುಕು
ರೋಗವೇ ತುಂಬಿದ ಮನ ಮನಗಳಲಿ ತ್ಯಾಗವನು ಬಯಸಿದೊಡೆ ದೊರೆತೀತೆ
ಧರ್ಮ ಅಧರ್ಮದ ನಡುವ ಅವಧಿಯಲಿ ಸ್ವಾರ್ಥವೇ ಮೆರೆದಿದೆ ಏನೀ ಬದುಕು
ಸಾವಿರ ಕನಸುಗಳ ಹೊತ್ತ ಕಂದಮ್ಮಗಳು ಬುವಿಯಲಿ ಉಳಿಯುವುದು ಹೇಗೆ
"ಸಿಡಿಲು"ನ ಬಾಲ್ಯದ ನೆನಪೇ ಮಧುರ ಇಂದಿನ ಬಾಲ್ಯದಲ್ಲೇನಿದೆ ಏನೀ ಬದುಕು
ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೨೩/೬/೨೦೧೮
Comments
Post a Comment