ಗಝಲ್೩೩
ಹಾಯ್
ಗಝಲ್ : ೩೩
~~~~~~~~
ಹೊರ ಶರೀರಕೆ ಘೋಷಾ ದರಿಸಿದರೆ ಆಸೆ ಅಳಿಯುವುದೇ ಸಖ
ಒಳ ಮನಸಿಗೆ ಮೋಸ ಮಾಡಿದೊಡೆ ಸುಖ ಅರಳುವುದೇ ಸಖ
ವಸಂತನಾಗಮನಕೆ ಮನ ಕಾತರಿಸುತಿಹುದ ಇಲ್ಲ ಎನಲಾದೀತೆ
ಮನದ ನವ ಚಿಗುರುಗಳು ಮೊಳೆಯದಂತೆ ತಡೆಯಬಹುದೇ ಸಖ
ಯಾರ ನುಡಿಯನಾಲಿಸದೇ ನಡೆಯ ಬದಲಿಸದಾಗಿದೆ ನನ್ನುಸಿರು
ಏನೆಂದು ಎನ್ನ ತುಟಿಯನೊಮ್ಮೆ ಮೃದುವಾಗಿ ಸವರಬಾರದೇ ಸಖ
ಬಯಕೆಗಳ ಬಚ್ಚಿಟ್ಟರೂ ಹಣತೆ ಹಚ್ಚಿದಂತೆ ಇರುಳಿನಲೂ ಬೆಳಗಿವೆ
ನಾನೊಲ್ಲೆನೆಂದರೂ ತನುವ ತವಕವನು ತಡೆಯಲಾಗುವುದೇ ಸಖ
ಹಚ್ಚಿದ ಕಿಚ್ಚಿಗೆ ಬೆಚ್ಚನೆಯ ಉಸಿರು ಕೇಳದೇ ತಿದಿಯನೊತ್ತುತಿದೆ.
ನೀ ಬಂದು ಒಡಲಾಳದ ಕಡಲ ಕಾಡ್ಗಿಚ್ಚುನು ತಣಿಸಬಹುದೇ ಸಖ
ನಿನ್ನೊಲವಿಗೆಂದೇ ಕಾದಿರುವೆ ಬಹುದಿನಗಳಿಂದ ಮರೆತು ಹೋದೆಯಾ
"ಸಿಡಿಲ"ನೇ ಮನವ ಮಲ್ಲಿಗೆ ಮಾಡಿ ಬರಸೆಳೆಯೆ ಬರಬಾರದೇ ಸಖ
ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೮/೬/೨೦೧೮
Comments
Post a Comment