ಪರಿವರ್ತನೆ
ಪರಿವರ್ತನೆ
~~~~~~
ಸರಸರನೆ ಬಿರಬಿರನೆ ಬೆಳೆಯಿತು
ಪರಿಸರವಂದು ನಡುಗಿದೆ ಕಾಣಿರಿ
ಬುವಿಯೊಡಲು ತರತರನಿಂದು
ಕಣ್ಣಿಗೆ ತಂಪುಣಿಸೋ ಕಡಲಿಂದು
ಕಸದ ಕೊಂಪೆಯಗಿಹುದು
ಕುಡಿಯುವ ಜಲವು ಅಂಗಾರದ ಆಗರವು
ಬೀಸುವ ವಾಯು ದೂಳಿನ ಗೋಳು
ಕೈಗಾರಿಕಾ ದೂಮದ ಹೋಳಿನಾಕಾರವು
ನಮಗಿಂದು ಅಭಿವೃದ್ಧಿ ಎಂಬ ಗೀಳು
ನರಕವಾಗಿದೆ ಜೀವಸಂಕುಲದ ಬಾಳು
ನಾಲಿಗೆಯ ತುದಿಯಲಿ ಪರಿಸರ ರಕ್ಷಣೆ
ಮನದಲಿ ಮೆಚ್ಚುಗೆಯು ನಿರೀಕ್ಷಿತ ಭಕ್ಷಣೆ
ಯಾರ ಮಾಡುವವರು ನಿತ್ಯ ಪರಿವೀಕ್ಷಣೆ
ಎಲ್ಲರ ಮನದಲಿ ಅವರದೇ ಪರಿಭ್ರಮಣೆ
ಮನವಿ ಮನ್ನಿಸಿ ಬನ್ನಿ ನಡೆಯಲಿ ಪರಿವರ್ತನೆ
ವೈಲೇಶ ಪಿ ಯೆಸ್ ಕೊಡಗು
೫/೬/೨೦೧೮
Comments
Post a Comment