ಚಿನ್ನದ ಚೂರಿ

ಚಿನ್ನದ ಚೂರಿ
~~~~~~~
ಹರೆಯಕೆ ಬಂದರೆ ಹೆತ್ತವರಿಗಿವರ ಚಿಂತೆ 
ದೂಷಿಸಲು ಜಗದ ಬಂಧು ಬಳಗವಂತೆ
ಸತ್ತರೂ ಮುಗಿಯದು ಬವಣೆಗಳ ಸಂತೆ
ಹರೆಯದ ಬಯಕೆಗೆ ಬದುಕ ಮರೆತಂತೆ 
ಹೇಗೆ ನಡೆದೆ ಸ್ವತಃ ನೀನೇ ಒಗೆದು ಕಂತೆ

ನಂದಾದೀಪ ಎಂದೆ. ದೀಪವನಾರಿಸಿದೆ.
ಕಿಚ್ಚು ಹಚ್ಚಿ ಒಡಲಿಗೆ ಮನ ನೋಯಿಸಿದೆ.
ಕಿರಿಯರಿಗೆ ದಾರಿದೀಪ ನೀನಾಗಬೇಕಿದೆ
ಎಂಬುದನು ಮರೆತು ಹೃದಯವನು‌ ಕಿತ್ತು
ನಿನ್ನ ಜೀವಕೆ ನೀನೇ ತಂದುಕೊಂಡೆ ಕುತ್ತು

ಬಾರದಿರು ಮತ್ತೆ ಜನುಮಕೂ ಮಗಳಾಗಿ
ಕೊಲ್ಲದಿರು ನಿತ್ಯವೂ ಚಿನ್ನದ ಚೂರಿಯಾಗಿ
ಹೃದಯ ಒಡೆದು ನಿಂತಿದೆ ಚೂರುಗಳಾಗಿ
ಹೇಗೆ ಮರೆಯಲಿ ನಾ ನಿನ್ನ ತಾಯಿಯಾಗಿ
ಬದುಕಬೇಕಿದೆ ನಿನ್ನ ಒಡಹುಟ್ಟುಗಳಿಗಾಗಿ

ಪ್ರೀತಿಯ ಅಬ್ಬರಕೆ ನೀತಿಯ ಬಿಟ್ಟವರು
ಪ್ರೀತಿಸಿ ಮಕ್ಕಳನು ನೋವಲಿ ಕೆಟ್ಟವರು
ಪ್ರೀತಿಯೇ ಜಗದಿ ಸಕಲವೂ ಎಂದವರು
ಪ್ರೀತಿಸಿ ಸಾಕಿ ಸಲಹಿದವರ ತೊರೆದವರು 
ಮಕ್ಕಳೆಂಬ ಬಹುಜನ್ಮದ ಶತ್ರುವರ್ಯರು

ವೈಲೇಶ ಪಿ ಯೆಸ್ ಕೊಡಗು
೭/೩/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ