ಕಾರ್ಡಿನಲ್ಲಿ‌ ಕಥೆ

ಕಾರ್ಡಿನಲ್ಲಿ ಕಥೆ
~~~~~~~~
ನಾಲ್ಕು ದಿನದಿಂದ ಆಹಾರ ಸಿಕ್ಕದುರಗ ಮರುಗಿ ಹರಿಯುತಲಿತ್ತು.
ಬೆದರಿದ ಚಿಗರೆಗಳ ಗೊರಸಿನ ಸದ್ದಿಗೆ ಸರಿದು ಮರದ ಬುಡ ಸೇರಿತು.  ಮತ್ತೆ ಹಿಂತಿರುಗುವ ಮನಸ್ಸು ಮಾಡಿರಲು ಗಾಬರಿಯಿಂದ ಹಿಂದೆ ಬಂದಿತು. ಹತ್ತಿರದಲೇ ಮತ್ತೆ ಗೊರಸಿನ ಗುಡುಗು. ಮರ ಹತ್ತದಿದ್ದರೆ ಉಳಿಯಲಾರದೀ ಜೀವ ಎಂದು ಇದ್ದ ಬದ್ಧ ಬಲವನ್ನುಪಯೋಗಿಸಿ ಮರವೇರುತ್ತಿತ್ತು.

ತನ್ನ ಜೀವದ ಸಖಿ ತಾನಿಟ್ಟ ತತ್ತಿಗೆ ಕಾವು ಕುಳಿತಿತ್ತು.  ತುತ್ತು ತರಲೋದ ಗಂಡ್ಹಕ್ಕಿ ತಿರುತಿರುಗಿ ನೋಡುತಾ ಗೂಡು ಸೇರಿತು. ಮರ ಹತ್ತುತಿದ್ದ ಉರಗ ಹಕ್ಕಿಯ ನೋಡಿ ಆಹಾರವಾಯಿತೆಂದು ಸರಸರನೆ ಹರಿಯಿತು.  ಸಖಿಗೆ ಗುಟುಕು ನೀಡುವ ಮುನ್ನ ಉರಗ ಮೇಲೆರಗಿತು. ಜೀವ ಉಳಿದರೆ ಸಾಕೆಂದು ಹಕ್ಕಿ ಹಾರಿದವು. ತುತ್ತು ತಪ್ಪಿದ ಉರಗದ ಕಣ್ಣು ಅಲ್ಲಿಯೇ ಇದ್ದ ಹಲ್ಲಿಯ ಮೇಲೆ ಹಾರಲೋಗಿ ಆಯಾ ತಪ್ಪಿ ಕೆಳಗೆ ಆಗತಾನೆ ತಲುಪಿದ ಕಾಳ್ಗಿಚ್ಚಿನಲ್ಲಿ ಬಿದ್ದು ಸತ್ತಿತು ಹಲ್ಲಿ ಹಕ್ಕಿಗಳ ಪ್ರಾಣ ಉಳಿಯಿತು.

ಮೊದಲ ಪ್ರಯೋಗ ತಪ್ಪಾಗಿದ್ದರೆ ಕ್ಷಮಿಸಿ

ವೈಲೇಶ ಪಿ ಯೆಸ್ ಕೊಡಗು
7/3/17

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ