ಗಝ಼ಲ್ : ೩೧ (ಮತ್ಲಾನ ಗಝಲ್)

ಗಜಲ್ : ೩೧ (ಮತ್ಲಾನ ಗಝಲ್)
~~~~~~~~~~~~~~~~~
ಮಾನ ಮುಚ್ಚುವ ಬಟ್ಟೆಯನ್ನೇಕೆ ಬಿಚ್ಚಿದಿರೆಂದು ನೀವೇ ಪ್ರಶ್ನಿಸಿಕೊಳ್ಳಿ
ಸತ್ತು ಬಿದ್ದಾಗ ಕಾಲಬೆರಳುಗಳನ್ನೇಕೆ ಕಟ್ಟಿದಿರೆಂದು ನೀವೇ ಪ್ರಶ್ನಿಸಿಕೊಳ್ಳಿ

ಕವಿ : ನಂರುಶಿ ಕುಂಬಾರ ಕಡೂರು.

ಮಾನ ಮುಚ್ಚುವ ಬಟ್ಟೆಯನ್ನೇಕೆ ಬಿಚ್ಚಿದಿರೆಂದು ನೀವೇ ಪ್ರಶ್ನಿಸಿಕೊಳ್ಳಿ
ಸತ್ತು ಬಿದ್ದಾಗ ಕಾಲಬೆರಳುಗಳನ್ನೇಕೆ ಕಟ್ಟಿದಿರೆಂದು ನೀವೇ ಪ್ರಶ್ನಿಸಿಕೊಳ್ಳಿ

ನಮ್ಮ ಇರವು ನಿಮಗೆಷ್ಟು ಹೊರೆಯಾಯಿತೆಂದು ನೀವೇ ಪ್ರಶ್ನಿಸಿಕೊಳ್ಳಿ
ನಿಮ್ಮಿಂದ ನಮಗೇತರ ಉಪಕಾರವಾಯಿತೆಂದು ನೀವೇ  ಪ್ರಶ್ನಿಸಿಕೊಳ್ಳಿ

ಬಡಿದು ತಿನ್ನದೇ ದುಡಿದು ತಿನ್ನುವವರು ನಾವು ಯಾರಲ್ಲೂ ಕೈಚಾಚಲಾರೆವು
ನಿಮಗೇತರ ಕಷ್ಟ ನಮ್ಮ ಪಾಡಿಗೆ ನಾವು ಬದುಕುವುದು ನೀವೇ ಪ್ರಶ್ನಿಸಿಕೊಳ್ಳಿ

ಬದುಕುವ ಹಕ್ಕು ನಮಗೆ ಕೊಟ್ಟವರು ಯಾರೆಂಬ ಅರಿವಿಲ್ಲವಾಯಿತೇಕೆ
ಕೊಲ್ಲುವ ಅಧಿಕಾರ ಅದ್ಹೇಗೆ ನಿಮ್ಮದಾಯಿತೆಂದು ನೀವೇ ಪ್ರಶ್ನಿಸಿಕೊಳ್ಳಿ  

ಕೊಂದ ಪಾಪವ ತಿಂದು ತೀರಿಸೆಂಬುದು ಜೀವಿಗಳ ಆಹಾರ ಸರಪಳಿಯಂತೆ
ತಿನ್ನುವುದಕ್ಕಲ್ಲದೇ ಕೊಂದಿರುವ ಕಾರಣವೇನೆಂದು ನೀವೇ ಪ್ರಶ್ನಿಸಿಕೊಳ್ಳಿ

ಮಾನ ಪ್ರಾಣವು "ಸಿಡಿಲು"ನ ಮೈ ಮನದೊಳಗಿಹುದ ನೀವು ಬಲ್ಲಿರೇನು
ಅರಿಯದೇ ಜಾರಿಬಿದ್ದಾಗ ಆಳಿಗೊಂದು ಕಲ್ಲೇಕೆಂದು ನೀವೇ ಪ್ರಶ್ನಿಸಿಕೊಳ್ಳಿ

ವೈಲೇಶ ಪಿ ಯೆಸ್ ಕೊಡಗು
೨೧/೫/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ