ನಮ್ ಹೈಕ್ ಳೇ ಬಂಗಾರ
ನಮ್ಹೈಕ್ಳೇ ಬಂಗಾರ
================
( ಜನಪದ ಶೈಲಿಯ ಪ್ರಯತ್ನ )
ಬಾಳು ಬಂಗಾರ ಆಗೋಯ್ತು ನೀ ಬಂದು
ಕೊಡ್ಲಿ ಹ್ಯಾಂಗ ಬಂಗಾರ ತಂದು
ಆಗ ಮಾರ್ತಾ ಇದ್ರೂ ಬಂಗಾರ ಬೀದ್ಯಾಗೆಲ್ಲ
ಈಗ ಮೈ ಕೈ ಪರ್ಚ್ಕೊಂಡ್ರು ಬಂಗಾರ ಕಾಣಾಂಗಿಲ್ಲ
ಅಗ್ದಗ್ದು ಬತ್ತೋಯ್ತು ಭೂಮ್ಯೋಡ್ಲು
ನೀರೂ ಬತ್ತೊಯ್ತು ಹುಡ್ಕೋಬೇಕು ಕಡ್ಲು
ಉಪ್ನೀರು ಸೋಸಿ ಕುಡಿಯೋ ಕಾಲ್ದಾಗೆ
ಉಪ್ಪಿನ್ ಗಾತ್ರ ಚಿನ್ನಕ್ಕೆ ಮಾರ್ಬೇಕು ಮನೆ
ಇದ್ದೋರು ಕಾಲ್ಗೆಜ್ಜೆ ಕಾಲ್ಚೈನು ಕೈಗೆ ಬಳೆ
ಇಲ್ದಿರೊ ನಾನೆಲ್ತರಲೇ ಬಂಗಾರ ನಿನ್ಹಳೆ
ಯಾವತ್ತೂ ಇದ್ದಿದ್ದೇ ನಿನ್ ಬೊಗಳೆ
ಹೊಲದ ಕಡೆ ನಡಿ ಬತ್ತಾಯ್ತೆ ಮಳೆ
ಬಿತ್ನಿಲ್ಲಾ ಬೆಳಿನಿಲ್ಲಾ ಈಪಾಟಿ ವರ್ಷ
ಇನ್ನೆಲ್ಲಿ ಬಂದಾತು ಬಾಳ್ನಾಗೆ ಹರ್ಷ
ನೆಟ್ಗೆ ಮಾಡ್ನಿಲ್ಲ ಬಾಳು ಯಾತ್ರ ಬಂಗಾರ್ದ್ ಗೀಳು
ಜವರಾಯ ಕರ್ಕೋಳೋ ಸಾಕಾಯ್ತು ಗೋಳು.
ಸುಮ್ನಿರೆ ಬತ್ತಾಯ್ತೆ ಮುಂಗಾರ್ ಮಳೆ
ಹಸ್ನಾಗಿ ಬಿತ್ತಿ ತೆಗ್ಯಾನ ಸಿಂಗಾರದ ಬೆಳೆ
ಹುಟ್ಟಿರೋ ಹೈಕ್ಳೇ ನಮ್ಗೆ ಬಂಗಾರ ಬಾರಿ
ಇದ್ಯಾ ಬುದ್ಧಿ ಕಲ್ಸಿ ತೋರ್ಸಾನ ಅವ್ಕೆ ದಾರಿ
ಬುಡ್ಬುಡು ಇದ್ದಿದ್ದೇ ನಿನ್ಹಳೇ ರಾಗ
ಹೊಟ್ಗಿಲ್ದಿದ್ಧಿದ್ರೂ ಬರ್ನಿಲ್ಲ ರೋಗ
ನಮ್ಹೈಕ್ಳೇ ಚಿನ್ನ ರನ್ನ ಬಂಗಾರ ನಮ್ಗೆ
ಇಬ್ರು ಸೇರ್ಕೊಂಡ್ ಬಾಳ್ಮೆ ಮಾಡಾನ ನೆಟ್ಗೆ
ವೈಲೇಶ ಪಿ ಯೆಸ್ ಕೊಡಗು
4/3/17
Comments
Post a Comment