ಕೆರೆಗೆ ಹಾರ
ಕೆರೆಗೆ ಹಾರ
~~~~~~
ಕೊಡಗು ಜಿಲ್ಲೆಯ ಹೆಸರಾಂತ ಕೆರೆ
ವಿಶ್ವ ಖ್ಯಾತಿಯ ಹೊನ್ನಮ್ಮನ ಕೆರೆ
ಎರಡು ಬೆಟ್ಟಗಳ ನಡುವೆ ನಿಂತಿರೆ
ಅಲೆ ಅಲೆಯಾಗಿ ತೇಲುತಿದೆ ತೆರೆ
ಪುರಜನರ ಒಳತಿಗೆ ಕೆರೆ ಕಟ್ಟಿದರು
ದಿನಗಳೇ ಕಳೆದರು ಬರಲಿಲ್ಲ ನೀರು
ಚಿಂತಿಸಿ ಸೋತರು ಊರ ಪಟೇಲರು
ಕನಸಲಿ ದೇವನುಸುರಿದನು ಕೇಳಿದರು
ಮಗಳಂತಹ ಸೊಸೆಯ ದೈವ ಕೇಳುತಿರೆ
ಕೈಯಾರೆ ಮಗನ ಬಾಳಿಗೆ ಇಡಲೇ ಬರೆ
ರಾಯರ ಕಿರಿಯ ಮಗನ ಸತಿ ಭಾಗೀರಥಿ
ಚಿನ್ನದ ಹರಿವಾಣದಿ ಬೆಳಗಿದಳು ಆರತಿ
ಪತಿ ಬರುವ ಮುನ್ನ ಕೆರೆಗಾದಳು ಆಹುತಿ
ದಂಡಿನ ದಾಂಗುಡಿಯ ಮುರಿದು
ಬಂದ ಪತಿರಾಯರು ಕಣ್ಣೀರಾದರೂ
ಊರುಕೇರಿಯ ಏಳ್ಗೆಗೆ ಪಶುಪಕ್ಷಿಗಳ
ಬಾಯಾರಿಕೆಗೆ ರೈತಗೆ ನೀರನ್ನೀಯೇ
ಹಾರವಾದ ಸತಿಯ ದೇವತೆ ಎಂದರು
ಕೇವಲ ದಂಡಿನ ದೊರೆಯ ಸತಿಯಾಗದೆ
ಜಗದ ಜನರಿಗೆ ಉಪಕಾರಿಯಾಗಿ ತನ್ನನ್ನೇ
ಬಲಿಕೊಟ್ಟು ಹೆಸರಾದ ಹೊನ್ನಮ್ಮ ದೇವಿಗೆ
ನನ್ನ ಮನದುಂಬಿದ ನಮನಗಳು ಮಿಗೆ
ವೈಲೇಶ ಪಿ ಯೆಸ್ ಕೊಡಗು
೪/೩/೨೦೧೮
Comments
Post a Comment