ಗಝ಼ಲ್ : ೨೧

ಗಝ಼ಲ್ : ೨೧
~~~~~~~~
ಸತ್ಯದ ಹಾದಿಗೆ ಬಾಗಿಲು ತೆರೆದಿರಲಿ‌ ಅನವರತ.
ನೀತಿಯು ತೇರಿನ ತೆರದಿ ನಡೆದಿರಲಿ ಅನವರತ.

ಸಭ್ಯ ನುಡಿ ಮನಕೆ ಆನಂದ ತರಲಿ ನಗುನಗುತ.
ಅಸಭ್ಯ ನಡೆ ಬಾಳಲಿ ಇಣುಕದಿರಲಿ ಅನವರತ.

ಬವಣೆಗಳಿರಲಿ ಬದುಕಿನಲಿ ಭವದ ಅರಿವಿನತ್ತ
ಭಾವನೆಗಳು ಬಳುಕಿ ಬದುಕನೆತ್ತಲಿ ಅನವರತ

ಸುಖ ದುಃಖಗಳನು ದೂರದೆ ನಡೆವ ಶಿವನ ಚಿತ್ತ
ಅವನೊಲಿದರೆ ಮುಕ್ತಿಯು ಹಸ್ತದಲಿ ಅನವರತ.

ನಮ್ಮ ಆಗಮನವು ಜಗದೊಳು ಪಾಪಿ ಜನ್ಮದತ್ತ
ದೇವರ ನಾಮ ಜಪವದು ಸಾಗುತಿರಲಿ ಅನವರತ

ಸಿಹಿ ಕಹಿಯು ತುಂಬಿರಲಿ ಜೀವನ ಪಯಣದತ್ತ
"ಸಿಡಿಲು"ನ ಬಳಗ ಏಳ್ಗೆಯ ಕಾಣತಿರಲಿ ಅನವರತ

ವೈಲೇಶ ಪಿ ಯೆಸ್ ಕೊಡಗು
೩/೩/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ