ಧನ್ಯೋಸ್ಮಿ ಎನ್ನಿರಿ


ಧನ್ಯೋಸ್ಮಿ ಎನ್ನಿರಿ
~~~~~~~~~
ನಾನು ನೀನೆಂಬ ಭೇದ ಬೇಕಿರಲಿಲ್ಲ
ಮಹಿಳೆಯರು ಇಲ್ಲದೇ ಜಗವೇ ಇಲ್ಲ
ಶೇಕಡಾವಾರು ಮೀಸಲು ಅಗತ್ಯವಿಲ್ಲ
ಜೀವಿಗಳ ಜನುಮಧಾತೆ ನಿನದೇ ಎಲ್ಲ

ಧರಣಿಯ ಹೋಲುವ ನಿನ್ನಯ ಒಡಲು
ಮನದಲಿ ಹರಿದಿದೆ ಭಾವನೆಯ ಕಡಲು
ಜಗದ ಸೃಷ್ಟಿಗೆ ನಾವು ಎಲ್ಲರೂ ಎರವಲು
ಪ್ರೇಮ ಕಾಮದೊಳು ನಾವೇ ಉರುವಲು 

ಎದ್ದು ಮೇಲೆದ್ದು ನಿಲ್ಲಿರಿ ಮೊದಲಿಗೆ ನೀವು
ಒದ್ದು  ಓಡಿಸಿರಿ ಮನದ ದುಗುಡದ ಬೇವು
ಪ್ರತೀ ಪುರುಷರು ನಿಮ್ಮ ಕರುಣೆಯ ಕೂಸು
ಅಹಂ ಅಳಿದು ಧನ್ಯೋಸ್ಮಿ ಎಂದರೆ ಲೇಸು 

ಸರಿದು ನಿಲ್ಲದಿರಿ ನೀವಲ್ಲ ಎಂದಿಗೂ ಅಬಲೆ 
ಸರಿ ಸಮಾನರು ಎಂದು ಕಿತ್ತೊಗೆಯಿರಿ ಬಲೆ
ನಾವು ನೀವು ಬೆರೆತ ಬದುಕು ಸಿಹಿಯಾಗಲಿ 
ಸಮರಸದ ಜೀವನ ಹಾಲು ಜೇನಿನಂತಾಗಲಿ

ಎಲ್ಲಾ ಸೃಷ್ಟಿ ಕಾರಣರಾದ ಮಹಿಳೆಯರಿಗೆ
ಮಹಿಳಾ ದಿನಾಚರಣೆಯ ಶುಭಾಶಯಗಳು

ವೈಲೇಶ ಪಿ ಯೆಸ್ ಕೊಡಗು
೮/೩/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ