ಕನಸು ಕಮರಿತು
ಕನಸು ಕಮರಿತು
~~~~~~~~~
ಹಾಸನ ಸೀಮೆಯ ಹರದೂರ ಕುವರ
ಬೇಸರ ಮೂಡಿತು ಕೇಳುತಲಿ ಇವರ ಜೀವನ ಪ್ರವರ
ಅದೆಷ್ಟೋ ಆಸೆಗಳ ಮನದೊಳಗಿಟ್ಟು ನಡೆದಿತ್ತು ಜೀವ
ಆರು ತಿಂಗಳಿಗೆಂದು ನಡೆದು ದುಷ್ಕರ್ಮಿಗಳ ಕುಕೃತ್ಯಕೆ
ಊರು ಕುಟುಂಬಕ್ಕೆ ಆರೇ ದಿನಕೆ ತಂದಿತ್ತಿತ್ತು ನೋವ.
ಪೃಥ್ವಿಯೊಡಲು ಚಿಗುರೊಡೆದಿತ್ತು. ಎಳೆಯ
ಕುಡಿಯದು ಅರಳುವ ಮೊದಲೇ ಅಪ್ಪನ ಕಾಣುವಾಸೆ
ಕಮರಿತು. ಮುದ್ದು ಕಂದನ ಜೊತೆಗೆ ನವ ಗೃಹ ಪ್ರವೇಶದ
ಕನಸು ನನಸಾಗುವ ಮುನ್ನ ನಕ್ಸಲರ ಅಕೃತ್ಯಕೆ
ಅಸ್ತಂಗತನಾದನೇ ಬಾಳ ಚಂದಿರ.
ಇಂಪು ಗಾನದ ಕಂಪು ಪಸರಿಸಿ ಸುಖದ ಸುಪ್ಪತ್ತಿಗೆಯ
ಮೂಟೆಗಳ ಪೇರಿಸಿ ಒಲವ ಸತಿಯ ಬಾಳಿಗೆ ಅಪ್ಯಾಯಮಾನ
ತಂಪು ತರುವೆನೆಂದು ತೆರಳಿ ನಖಶಿಖಾಂತ ನರಳಿ ಮಣ್ಣೊಳು
ಮಣ್ಣಾಗಿ ಹೋದನೇ ಚಂದ್ರಮ ಅದಾವ ಪರಿಯ ದುಃಖ
ಅದ್ಹೇಗೆ ಭರಿಸುವಳೋ ಪೃಥ್ವಿ ಅಕಟಕಟಾ
ನಕ್ಸಲ್ ಹೇಡಿಗಳೇ ಹೇಳಿರಿ ನಿಮಗೇನು ದೊರಕಿತು.
ಯಾರದೋ ತಪ್ಪಿಗೆ ಮತ್ತಾರಿಗೋ ಶಿಕ್ಷೆ ನೀಡುವುದು ತರವೇ.
ನಿಮಗೆ ಅನ್ಯಾಯವಾಗಿರಬಹುದು ಇಲ್ಲವೆಂದೆನ್ನಲಾರದು.
ಅನ್ಯಾಯಕೆ ಒಳಗೊಂಡವರೆಅನ್ಯಾಯವ ಗೈಯುವುದು
ಸರಿಯೇ. ಎಂಟು ಕುಟುಂಬದ ನಂಟು ಕಳೆದು ಅದೇನು ಪಡೆದಿರಿ
ವೈಲೇಶ ಪಿ ಯೆಸ್ ಕೊಡಗು
೧೬/೩/೨೦೧೮
Comments
Post a Comment