ಅಳಿಯಲಿ ತಂತ್ರ
ಅಳಿಯಲಿ ತಂತ್ರ
~~~~~~~~~
ಬೆಂಬಿಡದೇ ಬೆನ್ನಟ್ಟಿ ಬೆಂಬಲದ ಭೂತ
ಭಾರತದ ಬಲವನು ಬಾಗಿಸುವ ತಂತ್ರ
ಪರದೇಶದ ಪ್ರಯತ್ನದ ಪರಿ ಅತಂತ್ರ
ನಮ್ಮೊಳಗೇ ನಡೆಯುತಲಿದೆ ಕುತಂತ್ರ
ಇದುವೇ ದೇಶದ ಪ್ರಜಾಪ್ರಭುತ್ವ ಯಂತ್ರ
ದುಡಿದು ಉಣ್ಣುವ ಮನಸ್ಸು ಅಳಿದಿದೆ
ದಮ್ಮಡಿ ಹಣವಿಲ್ಲದೇ ತಿನ್ನ ಬೇಕಾಗಿದೆ
ಚುನಾವಣೆ ತಣ್ಣನೆ ಸಮೀಪಿಸುತಲಿದೆ
ಸರ್ವರಿಗೂ ಕ್ಯಾಂಟೀನ್ ದೊರೆಯುತ್ತಿದೆ
ಹೊತ್ತಿನ ಕೂಳಿಗೆ ಭವಿಷ್ಯ ಮಂಕಾಗುತಿದೆ
ಹಣದ ಹೊರತು ಮಿಕ್ಕೆಲ್ಲಾ ತೃಣವಾಗಿದೆ
ಹಣವೇ ಹಿರಿದಾಗಿ ಜ್ಞಾನವ ತುಳಿಯುತಿದೆ
ಕಾಸಿನ ಕಿಮ್ಮತ್ತಿಗೆ ಮೃದುತ್ವವದು ಅಳಿದಿದೆ
ಅಧಿಕಾರದ ಅಹಂನಿಂದ ನ್ಯಾಯಾಲಯವ
ದಿಟ್ಟಿಸಿ ನೀತಿಯನ್ನೇ ಖರೀದಿಗೆ ಯತ್ನಿಸಿದೆ
ಭರತ ದೇಶವ ಭರದಿಂದ ನಿಲ್ಲಿಸುವ ಜನತೆ
ಜಡ ನಿದಿರೆಯಿಂದೆದ್ದು ತೊರೆಯಲಿ ಜಡತೆ
ಏಳಿಗೆಗೆ ಪಣ ತೊಡಬೇಕಿರುವುದೇ ಕೊರತೆ
ದಡ್ಡತನ ತೊರೆದು ಹೆಚ್ಚಲಿ ಬುದ್ಧಿಯ ಒರತೆ
ಪ್ರಜ್ಞೆಯೆಂಬುದ ಒದ್ದೇಳಿಸು ಭಾರತ ಮಾತೆ
ವೈಲೇಶ ಪಿ ಯೆಸ್ ಕೊಡಗು
೧೫/೩/೨೦೧೮
Comments
Post a Comment